ಬಿ.ವೈ ವಿಜಯೇಂದ್ರ ಔಟ್ ಗೋಯಿಂಗ್ ಅಧ್ಯಕ್ಷ, 2028ಕ್ಕೆ ಅವರ ನಾಯಕತ್ವ ಇರಲ್ಲ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಡಿಸೆಂಬರ್,27,2025 (www.justkannada.in):  ನಾಳೆ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್,  ಬಿಜೆಪಿ ರಾಜ್ಯಾಧ್ಯಕ್ಷ  ಸ್ಥಾನದಲ್ಲಿ ಅವರೇ ಇನ್ನೂ ಬಹಳ ದಿನ ಇರಲ್ಲ. ವಿಜಯೇಂದ್ರ ಔಟ್ ಗೋಯಿಂಗ್ ಅಧ್ಯಕ್ಷ. ಮೊದಲಸಲ ಗೆದ್ದು  ಬಿಜೆಪಿ ರಾಜ್ಯಾಧ್ಯಕ್ಷ ಅದಂಗೆ ಅಲ್ಲ ಅದು. 2028ಕ್ಕೆ ಬಿಜೆಪಿಯಲ್ಲಿ ವಿಜಯೇಂದ್ರ ನಾಯಕತ್ವ ಇರಲ್ಲ. ಅವರ ತಂದೆ ಬಿಎಸ್ ಯಡಿಯೂರಪ್ಪ ನಾಯಕತ್ವ ಕೂಡ ಇರಲ್ಲ. ಸಿಎಂ ಆಗಿ ಪೂರ್ಣಾವಧಿ ಮುಗಿಸಲು ಬಿಎಸ್ ಯಡಿಯೂರಪ್ಪಗೆ ಬಿಡಲಿಲ್ಲ. ಬಿಜೆಪಿ ಹೈಕಮಾಂಡ್ ಬಿಎಸ್ ವೈರನ್ನ ಕಣ್ಣೀರು ಹಾಕಿಸಿದ್ರು ಎಂದು ಟೀಕಿಸಿದರು.

ಡಿಕೆ ಶಿವಕುಮಾರ್ ಬಹಳ ಶ್ರಮಪಟ್ಟು ಪಕ್ಷದ ಕೆಲಸ ಮಾಡಿದ್ದಾರೆ. ಡಿಕೆ ಶಿವಕುಮಾರ್ ಶ್ರಮ ಪಟ್ಟದ್ದಾರೆ ಅದರಲ್ಲಿ ಬೇರೆ ಮಾತಿಲ್ಲ. ಅಹಿಂದ ಸಮಾವೇಶ ಮಾಡೋದ್ರಲ್ಲಿ ತಪ್ಪೇನಿದೆ.  ಪಕ್ಷವನ್ನು ಬಲಗೊಳಿಸಲು ಸಮಾವೇಶ ಮಾಡಿದರೆ ತಪ್ಪಿಲ್ಲ ಎಂದು ಎಂ.ಬಿ ಪಾಟೀಲ್ ತಿಳಿಸಿದರು.

Key words: B.Y. Vijayendra, outgoing. president, Minister, M.B. Patil