ಜನವರಿ ನಂತರ ಕುರ್ಚಿ ಖಾಲಿ ಎಂಬುದು ಊಹೆ: 2028ರವರೆಗೂ ಸಿದ್ದರಾಂಯ್ಯ ಸಿಎಂ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಡಿಸೆಂಬರ್,3,2025 (www.justkannada.in): ಜನವರಿ ನಂತರ ಸಿಎಂ ಕುರ್ಚಿ ಖಾಲಿ ಎಂಬುದು ಊಹೆ ಅಷ್ಟೆ. 2028ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಅಧಿಕಾರ ಶಾಶ್ವತ ಅಲ್ಲ ಎಂಬ ಸಿಎಂ ಆಡಿರುವ ಮಾತು ಸತ್ಯವಿದೆ. ಮನುಷ್ಯನೂ ಶಾಶ್ವತ ಅಲ್ಲ. ಶಾಶ್ವತವಾಗಿ ಇರ್ತೇವೆ ಅನ್ನೋದು ಭ್ರಮೆ.  ಅಧಿಕಾರ ಹಸ್ತಾಂತರ ಯಾವಾಗ ಎಂಬುದು ಪ್ರಶ್ನೆ ಅಲ್ಲ.  2028ಕ್ಕೆ ಚುನಾವಣೆಯಿದೆ. ಅಲ್ಲಿವರೆಗೆ  ಆ ಮಾತು ಯಾಕೆ ಹೈಕಮಾಂಡ್ ಏನದರೂ ಹೇಳಿದೆಯಾ?  ಈಗಾಗಲೇ ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮಾಢಿದ್ದಾರಲ್ಲ ಎಂದರು.

ಕೊಟ್ಟ ಮಾತು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಏನೇ ಇದ್ದರೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ ಜನವರಿ ನಂತರ ಸಿಎಂ ಕುರ್ಚಿ ಖಾಲಿ ಎಂಬುದು ಊಹೆ ಅಷ್ಟೆ ಆ ರೀತಿ ಯಾವುದೇ ಬೆಳವಣಿಗೆ ಆಗಲ್ಲ.  2028ರವರೆಗೆ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ  ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

Key words: Siddaramaiah, will be, CM, till 2028, Minister, M.B. Patil