Thursday, August 13, 2026

BDA Apartments

Home Front Page ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಇದೊಂದು ಹೀನಕೃತ್ಯ, ದೇಶಕ್ಕೆ ಕಳಂಕ- ಸಚಿವ ಎಂ.ಬಿ ಪಾಟೀಲ್

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಇದೊಂದು ಹೀನಕೃತ್ಯ, ದೇಶಕ್ಕೆ ಕಳಂಕ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಮಾರ್ಚ್,10,2025 (www.justkannada.in): ತುಂಗಾಭದ್ರ ನದಿಯ ದಡದ ಬಳಿ ವಿದೇಶ ಮಹಿಳೆ ಸೇರಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ, ಇದೊಂದು ಹೀನಕೃತ್ಯ, ಇದು ದೇಶಕ್ಕೆ ಕಳಂಕ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಇದೊಂದು ಹೀನ ಕೃತ್ಯ. ಜನ ಎಚ್ಚರಿಕೆಯಿಂದ ಇರಬೇಕು.  ಸುರಕ್ಷಿತ  ಸ್ಥಳಕ್ಕೆ ಹೋಗಬೇಕು.  ಇಂತಹ ಕಿಡಿಗೇಡಿಗಳು ಇರುತ್ತಾರೆ. ಎಚ್ಚರ ವಹಿಸಬೇಕು ಎಂದು ಎಂ.ಬಿ ಪಾಟೀಲ್ ತಿಳಿಸಿದರು.

ನಟಿ ರನ್ಯಾರಾವ್ ಗೆ ಕೆಐಎಡಿಬಿಯಿಂದ ಭೂಮಿ ಮಂಜೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್,  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 12 ಎಕರೆ ಆಗಿದೆ. ಟಿಎಂಟಿ ಕಂಪನಿಯ ಹೆಸರಿಗೆ ಭೂಮಿ ಮಂಜೂರು ಆಗಿದೆ.  ವರದಿ ಪ್ರಸಾರದ ಬಳಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಪೂರ್ಣ ಮಾಹಿತಿ ಸಿಕ್ಕಿಲ್ಲ ತರಿಸಿಕಂಡು ಮಾತನಾಡುತ್ತೇನೆ ಎಂದರು.

Key words: foreign woman, Rape case, Minister, M.B. Patil