Wednesday, September 9, 2026

BDA Apartments

Home Front Page ಅವಧಿ ಮೀರಿದ ಆಹಾರ ಪದಾರ್ಥ ವಿತರಣೆ ಆಗಿದ್ದರೆ ಕ್ರಮ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಅವಧಿ ಮೀರಿದ ಆಹಾರ ಪದಾರ್ಥ ವಿತರಣೆ ಆಗಿದ್ದರೆ ಕ್ರಮ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಮಾರ್ಚ್,9,2026 (www.justkannada.in): ಅಂಗನವಾಡಿಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ವಿತರಣೆ ಆರೋಪ ಹಿನ್ನೆಲೆಯಲ್ಲಿ ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಉತ್ತರಿಸಿದ್ದಾರೆ.

ವಿಧಾನಪರಿಷತ್ ನಲ್ಲಿ ಇಂದು ಕಾಂಗ್ರೆಸ್ ಸದಸ್ಯ ನಾಗರಾಜ್ ಅಂಗನವಾಡಿಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ವಿತರಣೆ ಮಾಡುತ್ತಿರುವ ಆರೋಪದ ಬಗ್ಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ಕೊಡಲು ಸಾಧ್ಯವಿಲ್ಲ. 6 ತಿಂಗಳ ಹಿಂದಿನ ವಿಡಿಯೋ ಹರಿಬಿಟ್ಟು ರಾಜಕೀಯ ಮಾಡಿದ್ದಾರೆ ತಪ್ಪು ಏನೂ ಆಗಿಲ್ಲ ಒಂದು ವೇಳೆ  ತಪ್ಪು ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ  ಎಂದರು.

Key words: Action, expired ‍food, Minister, Lakshmi Hebbalkar