ಬೆಳಗಾವಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಿದ ಸಚಿವ ಕೆ.ಎಸ್ ಈಶ್ವರಪ್ಪ.

ಬೆಳಗಾವಿ,ಡಿಸೆಂಬರ್,21,2021(www.justkannada.in): ಬೆಳಗಾವಿಯ ಅನಗೊಳದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಇಂದು ಬೆಳಿಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ  ಕೆ ಎಸ್ ಈಶ್ವರಪ್ಪ ಭೇಟಿ ನೀಡಿ ಹಾರ ಹಾಕಿ ಗೌರವ ಸಮರ್ಪಣೆ ಮಾಡಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಈ ನಾಡಿನ ಮಹಾಪುರುಷರುಗಳು ಅವರು ಈ ನಾಡಿಗೆ ತ್ಯಾಗವನ್ನ ಸಮರ್ಪಿಸಿದ್ದಾರೆ.

ಇಂತಹ ಮಹಾಪುರುಷರ ಮೂರ್ತಿಗಳಿಗೆ ತೊಂದರೆ ಮಾಡಿರುವ ಆ ಪುಂಡ  ಪೋಕರಿಗಳಿಗೆ ತಕ್ಕ ಶಾಸ್ತಿಯನ್ನ ನಮ್ಮ ಸರ್ಕಾರ ಮಾಡುತ್ತೆ. ಎಂಇಎಸ್ ಈಗಾಗಲೇ ನಶಿಸಿ ಹೋಗುತ್ತಾ ಇದೆ ಇಂತಹ ಸಂದರ್ಭದಲ್ಲಿ  ಇಂತಹ ಹೀನ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದು ದುರಾದೃಷ್ಟಕರ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.

Key words: Minister- KS Eshwarappa -Belgaum -Sangolli Rayanna -statue

ENGLISH SUMMARY…

Minister K.S. Eshwarappa visits Sangolli Rayanna statue place in Belagavi, offers salutes
Belagavi, December 21, 2021 (www.justkannada.in): The Rural Development and Panchayat Minister K. S. Eshwarappa today visited Anegoli in Belagavi, where the Krantiveera Sangolli Rayanna’s statue is located, and garlanded the statue.
Speaking to the media persons after that, K.S. Eshwarappa observed that Sangolli Rayanna and Kittur Rani Chennamma are among the greatest warriors of this land, whose sacrifices will be remembered forever.
“Our government won’t spare those who vandalized the statues of any such great people. MES is already dying. In such a situation encouraging such acts is condemnable and very unfortunate,” he said.
Keywords: Minister K.S. Eshwarappa/ Sangollia Rayanna statue/ garland