Tuesday, September 22, 2026

BDA Apartments

ಚುನಾವಣೆ ಮುಗಿಯುತ್ತಿದ್ದಂತೆ ಸಿಲಿಂಡರ್ ಬೆಲೆ ಏರಿಕೆ: ಇದು ಕೇಂದ್ರದ ಗಿಮಿಕ್-...
Home Front Page ಚುನಾವಣೆ ಮುಗಿಯುತ್ತಿದ್ದಂತೆ ಸಿಲಿಂಡರ್ ಬೆಲೆ ಏರಿಕೆ: ಇದು ಕೇಂದ್ರದ ಗಿಮಿಕ್- ಸಚಿವ ಕೃಷ್ಣ ಭೈರೇಗೌಡ

ಚುನಾವಣೆ ಮುಗಿಯುತ್ತಿದ್ದಂತೆ ಸಿಲಿಂಡರ್ ಬೆಲೆ ಏರಿಕೆ: ಇದು ಕೇಂದ್ರದ ಗಿಮಿಕ್- ಸಚಿವ ಕೃಷ್ಣ ಭೈರೇಗೌಡ

ಶಿವಮೊಗ್ಗ,ಮೇ,1,2026 (www.justkannada.in):  ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 993 ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಚಾಟಿ ಬೀಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಬಳಕೆ ಸಿಲಿಂಡರ್ ದರ ಏರಿಸಿದ್ದಾರೆ ಇದೆಲ್ಲಾ ಕೇಂದ್ರ ಸರ್ಕಾರದ ಚುನಾವಣೆ ಗಿಮಿಕ್ ಎಂದು ಲೇವಡಿ ಮಾಡಿದರು.

ಈಗಾಗಲೇ ದೇಶದಲ್ಲಿ ಅನೇಕ ಹೋಟೆಲ್ ಗಳು ಬಾಗಿಲು ಮುಚ್ಚಿವೆ ಸಣ್ಣಪುಟ್ಟ  ವ್ಯಾಪಾರಸ್ಥರು ಬೀದಿಗೆ ಬಂದಿದ್ದಾರೆ. ಸಮಸ್ಯೆ ಇದ್ದರೆ ಏಕೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರುತ್ತಿದ್ದಾರೆ.  ಗ್ಯಾಸ್ ಅಭಾವ ಇದ್ದರೆ ಕಾಳಸಂತೆಯಲ್ಲಿ ಹೇಗೆ ಸಿಲಿಂಡರ್ ಮಾರಾಟ ವಾಗುತ್ತಿದೆ.  ಕೇಂದ್ರ ಸರ್ಕಾರ ಈ ಅಕ್ರಮ ತಡೆಯಲು ಕ್ರಮ ಕೈಗೊಳ್ಳಬೇಕು. ಬೆಲೆ ಏರಿಕೆಯಿಂದ ದೇಶದ ಜನ ಈಗಾಗಲೇ ತತ್ತರಿಸಿ ಹೋಗಿದ್ದಾರೆ ಎಂದು ಕಿಡಿಕಾರಿದರು.

Key words: Cylinder prices, rise, Central Government, Minister, Krishna Bhairegowda