ಬೆಂಗಳೂರು ಬೆಂಕಿ ಅನಾಹುತಕ್ಕೆ ಅಕ್ರಮವಾಗಿ ಸಾನಿಟೈಸರ್ ಸಂಗ್ರಹಿಸಿದ್ದು ಕಾರಣವೇ…?

ಬೆಂಗಳೂರು, ನವೆಂಬರ್ 12,2020(www.justkannada.in) : ಹೊಸಗುಡ್ಡದಹಳ್ಳಿಯ ಕಾರ್ಖಾನೆಯಲ್ಲಿ ಕಾನೂನುಬಾಹಿರವಾಗಿ ರಾಸಾಯನಿಕ ದಾಸ್ತಾನು ಮಾಡಿದ್ದು, ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.Minister- K.Sudhakar- visits –hosaguddadalli-inspection

ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದ ಕಾರ್ಖಾನೆಯ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್,  ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, “ಇಲ್ಲಿ ಕಾನೂನುಬಾಹಿರವಾಗಿ ಸ್ಯಾನಿಟೈಜರ್ ಸೇರಿದಂತೆ ರಾಸಾಯನಿಕ ಸಂಗ್ರಹಿಸಲಾಗಿತ್ತು ಎಂಬ ದೂರು ಇದೆ. ಆಲ್ಕೋಹಾಲ್ ಗೆ ಸಂಬಂಧಿಸಿದ ರಾಸಾಯನಿಕ ಕೂಡ ಇಲ್ಲಿತ್ತು. ಸ್ಯಾನಿಟೈಜರ್ ಸಂಗ್ರಹಿಸಲು ಆರೋಗ್ಯ ಇಲಾಖೆಯಡಿಯ ಡ್ರಗ್ ಕಂಟ್ರೋಲರ್ ಕಡೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಕಾನೂನುಬಾಹಿರವಾಗಿ ರಾಸಾಯನಿಕ ಸಂಗ್ರಹ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.Minister- K.Sudhakar- visits –hosaguddadalli-inspection

“ಈ ರಾಸಾಯನಿಕವನ್ನು ಬೇರೆ ಕಂಪನಿಗಳು ಖರೀದಿಸಿದರೂ ಅದು ಕಾನೂನು ಉಲ್ಲಂಘನೆಯಾಗುತ್ತದೆ. ಯಾವುದೇ ದೊಡ್ಡ ಕಂಪನಿಯಾದರೂ ಕ್ರಮ ಜರುಗಿಸಲಾಗುವುದು. ಜೊತೆಗೆ ನಮ್ಮ ಡ್ರಗ್ ಕಂಟ್ರೋಲರ್ ಗಳು ಏಕೆ ಪರಿಶೀಲನೆ ನಡೆಸಿಲ್ಲ ಎಂದು ವಿಚಾರಿಸಿ, ಅಧಿಕಾರಿಗಳ ತಪ್ಪಿದ್ದರೆ ಅವರ ಮೇಲೂ ಕ್ರಮ ಜರುಗಿಸಲಾಗುವುದು” ಎಂದು ಹೇಳಿದರು.

“ಜನವಸತಿ ಪ್ರದೇಶಗಳಲ್ಲಿರುವ ಕಾರ್ಖಾನೆಗಳನ್ನು ಗುರುತಿಸಿ ಸ್ಥಳಾಂತರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲ ಮನೆ, ಸಾಮಗ್ರಿಗಳು ಹಾನಿಯಾಗಿವೆ. ನಷ್ಟದ ಪ್ರಮಾಣದ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರು ವರದಿ ನೀಡಲಿದ್ದು, ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಪರಿಹಾರ ನೀಡುವ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸಚಿವ ಸುಧಾಕರ್ ವಿವರಿಸಿದರು.

English summary…

Action will be taken after the investigation report is submitted: Health and Family welfare Ministrer Dr.K.Sudhakar

Minister inspects Hosaguddadahalli fire accident site, Government to decide on Compensation

Bengaluru, November 12, 2020: Chemicals were stockpiled illegally in Hosaguddadahalli factory godown and action will be initiated against the culprits after investigation report is submitted says Health & Medical Education Minister Dr.K.Sudhakar. He was inspecting the factory site where there was a fire incident on Tuesday.

Speaking to the media here Dr.Sudhakar said that huge quantity of chemicals including sanitizers were being stored here in the godown without obtaining the permission. Alcohol related chemicals were also there. One needs to obtain permission from Drug controller under Health department to store sanitizer. Action will be taken against the culprits he said.

It is illegal too to sell these chemicals to other companies, we will initiate strict action, no matter how big the company is. Said the Minister. Action will also be initiated against the erring officials if found guilty, he said.

Officials of pollution control Board are instructed to shift such factories to safer places in the outskirts of the city away from residential areas. Some houses and other properties are damaged in this fire incident. BBMP joint commissioner will submit a report regarding the quantum of damage. Compensation will be given to affected families after discussing with Chief Minister B.S.Yediyurappa, Dr.Sudhakar said.

Key words: Minister- K.Sudhakar- visits –hosaguddadalli-inspection