Thursday, September 24, 2026

BDA Apartments

Home Front Page ಸಚಿವ ಜಮೀರ್ ಹೇಳಿಕೆಗೆ ಕಾಂಗ್ರೆಸ್ ಶಾಸಕರಿಂದಲೇ ಖಂಡನೆ

ಸಚಿವ ಜಮೀರ್ ಹೇಳಿಕೆಗೆ ಕಾಂಗ್ರೆಸ್ ಶಾಸಕರಿಂದಲೇ ಖಂಡನೆ

ಮಂಡ್ಯ,ನವೆಂಬರ್,12,2024 (www.justkannada.in): ಕೇಂದ್ರ ಸಚಿವ ಹೆಚ್.‌ಡಿ ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆದು ವಿವಾದಕ್ಕೆ ಕಾರಣರಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಗಣಿಗ ರವಿಕುಮಾರ್,  ಜಮೀರ್ ಅಹ್ಮದ್ ಖಾನ್ ಈ ರೀತಿಯಾಗಿ ಕರೆಯೋದು ಅವರ ಘನತೆಗೆ ಶೋಭೆ ತರಲ್ಲ. ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ಬಣ್ಣದ ಕುರಿತು ಸಚಿವ ಜಮೀರ್ ಮಾತನಾಡಿರೋದು ತಪ್ಪು. ಜನಪ್ರತಿನಿಧಿಗಳಾದ ಮೇಲೆ ಮಾತಿನಲ್ಲಿ ಹಿಡಿತವಿರಬೇಕು. ಯಾರು ಯಾವುದೇ ವ್ಯಕ್ತಿಯನ್ನು ಅವರ ಬಣ್ಣದಿಂದ ನಿಂದಿಸಬಾರದು. ಆ ರೀತಿ ಕರೆದಿರೋದು ತಪ್ಪು ಎಂದು ಖಂಡಿಸಿದ್ದಾರೆ.ಸಚಿವ ಜಮೀರ್ ಹೇಳಿಕೆಗೆ ಕಾಂಗ್ರೆಸ್ ಶಾಸಕರಿಂದಲೇ ಖಂಡನೆ ravikumar ganiga

ಕರಿಯಣ್ಣ, ಕುಳ್ಳಣ್ಣ ಅಂತ ವೈಯಕ್ತಿಕವಾಗಿ ಮಾತನಾಡಿಕೊಳ್ಳುತ್ತಿದ್ದೆವು ಅಂತ ಅವರೇ ಹೇಳಿದ್ದಾರೆ. ಜಮೀರ್ ಅವರು ಮಾತನಾಡಿರೋದು ತಪ್ಪು. ಕೆಲವೊಮ್ಮೆ ಜನಪ್ರತಿನಿಧಿಗಳಿಗೆ ಮಾತಿನ ಮೇಲೆ ಹಿಡಿತ ಇರಬೇಕು. ನಿಂದನೆಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ. ಟೀಕೆ ಟಿಪ್ಪಣಿ ಮೇಲೆ ಚುನಾವಣೆ ನಿರ್ಧಾರವಾಗಲ್ಲ ಎಂದು ರವಿಕುಮಾರ್ ಗಣಿಗ ತಿಳಿಸಿದರು.

Key words: Minister, Jameer,  statement, condemned, Congress, MLA