ಧಾರವಾಡ,ಜನವರಿ,16,2026 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ , ಕ್ರಾಂತಿ ವಿಚಾರದ ಬಗ್ಗೆ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ಯಾವುದೇ ಕ್ರಾಂತಿಯೂ ಇಲ್ಲ ಬ್ರಾಂತಿಯೂ ಇಲ್ಲ, ನವೆಂಬರ್ ಬಳಿಕ ಬಿಜೆಪಿಯವರಿಗೆ ವಾಂತಿ ಬೇಧಿ ಆರಂಭವಾಗುತ್ತದೆ ಎಂದು ನಾನೇ ಹೇಳಿದ್ದೆ. ಈಗ ಬಿಜೆಪಿಯವರಿಗೆ ವಾಂತಿ-ಬೇಧಿ” ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಪದ್ದತಿ ಇದೆ. ರಾಜ್ಯದಲ್ಲಿ ಬಿಜೆಪಿಗೆ ಇಲ್ಲಿವರೆಗೆ ಬಹುಮತ ಬಂದಿಲ್ಲ. ಅಪರೇಷನ್ ಕಮಲ ಮಾಡಿಯೇ ಅವರ ಸರ್ಕಾರ ರಚನೆ ಮಾಡಿದ್ದು ಎಂದು ಜಮೀರ್ ಅಹ್ಮದ್ ಖಾನ್ ಟೀಕಿಸಿದರು.
Key words: no revolution, no rebellion, BJP, Minister, Jameer Ahmad khan







