ಸಿಎಂ ಬದಲಾವಣೆ ಸಂಬಂಧ ಯಾವ ಒಪ್ಪಂದವೂ ಆಗಿಲ್ಲ- ಸಚಿವ ಜಮೀರ್ ಸ್ಪಷ್ಟನೆ

ಹಾವೇರಿ,ನವೆಂಬರ್,3,2025 (www.justkannada.in): ಸಿಎಂ ಬದಲಾವಣೆ ಸಂಬಂಧ ಯಾವ ಒಪ್ಪಂದವೂ ಆಗಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ರಾಜ್ಯದಲ್ಲಿ  ಸಿಎಂ ಬದಲಾವಣೆ ಬಗ್ಗೆ ಯಾವ ಒಪ್ಪಂದವೂ ಆಗಿಲ್ಲ. 2028ರವರೆಗೆ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ತಿಳಿಸಿದರು.

ನಮ್ಮದು ಹೈಕಮಾಂಡ್ ಪಕ್ಷ.  ನಾನು ಪಕ್ಷದ ಶಿಸ್ತಿನ ಸಿಪಾಯಿ.  ಹೈಕಮಾಂಡ್ ಹಾಕಿದ ಗೆರೆಯನ್ನ ಯಾರೂ ದಾಟುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

Key words: No agreement, CM change, Minister, Jameer Ahamad khan