ಆನೆ ದಾಳಿಗೆ ಮೃತಪಟ್ಟ ಕೇರಳ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಟೀಕಿಸಿದ  ಬಿಜೆಪಿಗೆ ತಿರುಗೇಟು ನೀಡಿದ ಸಚಿವ ಈಶ್ವರ್ ಖಂಡ್ರೆ.

ಬೆಂಗಳೂರು, ಫೆಬ್ರವರಿ,21,2024(www.justkannada.in): ಆನೆ ದಾಳಿಗೆ ಮೃತಪಟ್ಟ ಕೇರಳ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆಯನ್ನ ಟೀಕಿಸಿದ  ಬಿಜೆಪಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ,  ದಯೆ ಮತ್ತು ಮಾನವೀಯತೆಯ ಆಧಾರದ ಮೇಲೆ ಪರಿಹಾರ ಘೋಷಣೆ ಮಾಡಿದ್ದೇವೆ. ದಯವೇ ಧರ್ಮದ ಮೂಲವಯ್ಯ ಅಂತ ವಿಶ್ವಗುರು ಬಸವಣ್ಣ ಹೇಳಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಮಾನವೀಯತೆಯ ಆಧಾರವಾಗಿ ಪರಿಹಾರ ಘೋಷಣೆ ಮಾಡಿದ್ರೆ, ಅದಕ್ಕೆ ಬಿಜೆಪಿಯವರು ತಕರಾರು ಮಾಡುತ್ತಾರೆ  ಅಂದರೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಕೇರಳದ ಸಂಸದರು. ದಾಳಿ ಮಾಡಿದ ಆನೆ ಕರ್ನಾಟಕದ್ದು ಅಂತ ಮೃತನ ಪರಿವಾರದವರು ರಾಹುಲ್ ಗಾಂದಿ ಅವರ ಬಳಿ ಹೇಳಿದ್ದಾರೆ. ನೀವು ಹೇಳಿದ್ರೆ ಪರಿಹಾರ ಸಿಗಬಹುದು ಅಂತ ಮೃತನ ಪರಿವಾರದವರು ರಾಹುಲ್ ಗಾಂಧಿ ಅವರ ಬಳಿ ಕಣ್ಣೀರಿಟ್ಟಿದ್ದಾರೆ. ರಾಹುಲ್ ಗಾಂಧಿಯವರು ಒತ್ತಡ ಹಾಕಿಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲಿ‌ ಸುನಾಮಿ, ಭೂಕಂಪ, ಪ್ರಕೃತಿ ವಿಕೋಪ ಆಗಿದ್ದಾಗ ಪರಿಹಾರಕ್ಕೆ ಬೇರೆ ಬೇರೆ ರಾಷ್ಟ್ರಗಳನ್ನ ಕೇಳ್ತಾರೆ. ನಾವು ಬೇರೆ ರಾಷ್ಟ್ರದಿಂದ, ಬೇರೆ ರಾಷ್ಟ್ರ ನಮ್ಮಿಂದ ಯಾವತ್ತೂ ಸಹಕಾರ ಪಡೆದುಕೊಂಡಿಲ್ವಾ? ಅದೇ ರೀತಿ ಮಾನವೀಯತೆ ದೃಷ್ಠಿಯಿಂದ ಪರಿಹಾರ ನೀಡಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

Key words: Minister- Ishwar Khandre – BJP – criticizing – compensation – Kerala –family