Tuesday, September 15, 2026

BDA Apartments

Home Front Page ಸಚಿವರ ಕ್ಷೇತ್ರದಲ್ಲಿ ಭರ್ಜರಿ ಬಾಡೂಟ: ನೂಕು-ನುಗ್ಗಲಲ್ಲಿ ಕಾಲ್ತುಳಿತಕ್ಕೆ ವೃದ್ದೆ ಕಾಲು ಮೂಳೆ ಮುರಿತ.

ಸಚಿವರ ಕ್ಷೇತ್ರದಲ್ಲಿ ಭರ್ಜರಿ ಬಾಡೂಟ: ನೂಕು-ನುಗ್ಗಲಲ್ಲಿ ಕಾಲ್ತುಳಿತಕ್ಕೆ ವೃದ್ದೆ ಕಾಲು ಮೂಳೆ ಮುರಿತ.

ಮೈಸೂರು,ಜೂನ್,5,2023(www.justkannada.in): ಸಮಾಜ ಕಲ್ಯಾಣ  ಇಲಾಖೆ ಸಚಿವ ಡಾ ಹೆಚ್.ಸಿ ಮಹದೇವಪ್ಪ ಅವರು ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಭರ್ಜರಿ ಬಾಡೂಟ ಆಯೋಜನೆ ಮಾಡಲಾಗಿತ್ತು.

ಟಿ‌.ನರಸೀಪುರ ತಾಲ್ಲೂಕಿನ ಹೆಳವರ ಹುಂಡಿ ಸಮೀಪ ಸಮಾಜ ಕಲ್ಯಾಣ ಸಚಿವ ಡಾ ಹೆಚ್. ಸಿ ಮಹದೇವಪ್ಪರಿಂದ ಕೃತಜ್ಞತಾ ಸಮಾರಂಭದ ಅಂಗವಾಗಿ  ಕಾರ್ಯಕರ್ತರಿಗೆ ಬಾಡೂಟ ಆಯೋಜನೆ ಮಾಡಲಾಗಿತ್ತು. ಸುಮಾರು 10 ಸಾವಿರಕ್ಕೂ  ಹೆಚ್ಚು ಮಂದಿಗೆ ಬಾಡೂಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಬಾಡೂಟಕ್ಕೆ ಕಾರ್ಯಕರ್ತರ ನೂಕು ನುಗ್ಗಲು ಉಂಟಾಗಿದ್ದು, ಈ ವೇಳೆ ಕಾಲ್ತುಳಿತಕ್ಕೆ ವೃದ್ದೆಯ ಕಾಲು ಮೂಳೆ ಮುರಿದ ಘಟನೆ ನಡೆದಿದೆ. ನೂಕು ನುಗ್ಗಲಲ್ಲಿ 66ವರ್ಷದ ಚಿಕ್ಕಮುತ್ತಮ್ಮ ಕೆಳಕ್ಕುರುಳಿದ್ದು,  ಕಾಲ್ತುಳಿತಕ್ಕೆ ಚಿಕ್ಕಮುತ್ತಮ್ಮ ಬಲಗಾಲ ಮೂಳೆ ಮುರಿದಿದೆ.ಸಚಿವರ ಕ್ಷೇತ್ರದಲ್ಲಿ ಭರ್ಜರಿ ಬಾಡೂಟ hc mahadevappa

ತಕ್ಷಣ ಅಲ್ಲಿಯೇ ಇದ್ದ ಯುವಕರು ಚಿಕ್ಕ ಮುತ್ತಮ್ಮರನ್ನ ರಕ್ಷಣೆ ಮಾಡಿದ್ದು, ಕೂಡಲೇ ಅಂಬುಲೆನ್ಸ್ ಗೆ ಕರೆ ಮಾಡಲಾಗಿತ್ತು. ಆದರೆ ಟ್ರಾಫಿಕ್ ಜಾಮ್ ನಿಂದಾಗಿ ಅಂಬುಲೆನ್ಸ್ ಸಮಯಕ್ಕೆ ಬಾರಲಿಲ್ಲ ಎನ್ನಲಾಗಿದೆ. ಇನ್ನು ಚಿಕ್ಕಮುತ್ತಮ್ಮರಿಗೆ  ಟಿ‌.ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ರವಾನೆ ಮಾಡಲಾಯಿತು.

Key words: minister-HC Mahadevappa-  old woman -broke – leg