ಮಣ್ಣಲ್ಲಿ ಮಣ್ಣಾದ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಕೆ

ಹಾಸನ,ಜುಲೈ,20,2026 (www.justkannada.in):  ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ನಿಧನರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ನೆರವೇರಿತು.

ಹಾಸನ ಜಿಲ್ಲೆ ಹೊಳೇನರಸಿಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು. ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಸಿಡಿಸಿ  ಚೆನ್ನಮ್ಮರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು.  ಬಳಿಕ ಚೆನ್ನಮ್ಮ ಕುಟುಂಬದ ಸದಸ್ಯರಿಗೆ ಸಿಎಂ ಡಿಕೆ ಶಿವಕುಮಾರ್ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪತ್ನಿಯ ಪಾರ್ಥಿವ ಶರೀರಕ್ಕೆ ಹೂ ಗುಚ್ಛ ಇರಿಸಿ ಭಾವುಕರಾದರು.

ಸಿಎಂ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶಿವರಾಜ್ ಸಿಂಗ್ ಚೌಹಾಣ್, ವಿ.ಸೋಮಣ್ಣ  ಬಿವೈ ವಿಜಯೇಂದ್ರ, ಸಚಿವರಾದ ಕೃಷ್ಣಭೈರೇಗೌಡ, ಕೆಜೆ ಜಾರ್ಜ್, ಕೆಎಚ್ ಮುನಿಯಪ್ಪ  ಸೇರಿ ಶಾಸಕರು ರಾಜಕೀಯ ಗಣ್ಯರು, ಮಠಾಧೀಶರು ಚೆನ್ನಮ್ಮ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಇದಾದ ಬಳಿಕ  ಕಿರಿಯ ಪುತ್ರ ಹೆಚ್ ಡಿ ರಮೇಶ್ ಅವರು ಅಂತಿಮ ವಿಧಾನ ಪೂರೈಸಿದ್ದು ಅಂತ್ಯಕ್ರಿಯೆ ನೆರವೇರಿತು.

Key words: ‍Former PM, H.D. Deve Gowda’s,  wife,  Chennamma, Funeral