ಬೆಂಗಳೂರು,ಸೆಪ್ಟಂಬರ್,9,2025 (www.justkannada.in): ಧರ್ಮದ ಹೆಸರಲ್ಲಿ ಒಡಕು ಮೂಡಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಬಿಜೆಪಿ ಸಂಘರ್ಷವಾಗಲಿ ಎಂದು ಒಡಕು ಮೂಡಿಸುತ್ತಿದೆ. ಬಿಜೆಪಿಯವರು ಏನೇನೋ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆಗಿಲ್ಲ ಧರ್ಮಸ್ಥಳ ವಿಚಾರಕ್ಕೂ ಏನೇನೋ ಬಿಜೆಪಿಯವರು ಮಾಡುತ್ತಿದ್ದಾರೆ.
ಗೀರೀಶ್ ಮಟ್ಟಣ್ಣನವರ್, ತಿಮರೋಡಿ ಯಾರು ಅಂತಾ ಬಿಜೆಪಿ ಹೇಳಲಿ. ಅವರ ಉದ್ದೇಶ ಸಫಲ ಆಗಲ್ಲವೆಂದು ಧರ್ಮಸ್ಥಳ ಪ್ರಕರಣವನ್ನ ಎನ್ ಐಎ ತನಿಖೆಗೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಒಂದು ಕಡೆ ಧರ್ಮಸ್ಥಳಕ್ಕೆ ಹೋಗಿ ಬೆಂಬಲ ಮತ್ತೊಂದು ಕಡೆ ವಿರೋಧಿಸಿ ಪ್ರತಿಭಟನೆ ಮಾಡುತ್ತಾರೆ ಎಂದು ಹೆಚ್ ಕೆ ಪಾಟೀಲ್ ಕಿಡಿಕಾರಿದರು.
Key words: BJP, religion, political, Minister, H.K. Patil







