Tuesday, August 11, 2026

BDA Apartments

Home Front Page ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಆರೋಪ: ಸ್ಪಷ್ಟನೆ  ನೀಡಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಆರೋಪ: ಸ್ಪಷ್ಟನೆ  ನೀಡಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಮಾರ್ಚ್,28,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್  ಅಳವಡಿಸಲಾಗಿದೆ ಎಂಬ ಸಾರ್ವಜನಿಕರ ಕಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಹೆಚ್.ಸಿ ಮಹದೇವಪ್ಪ, ವೈಜ್ಞಾನಿಕವಾಗಿಯೆ ಸಿಗ್ನಲ್ ಗಳನ್ನು ಹಾಕಲಾಗಿದೆಮೈಸೂರು ಬೆಳವಣಿಗೆ ಆಧಾರದಲ್ಲಿ ಸಿಗ್ನಲ್ ಹಾಕಿದ್ದೇವೆ. ಏನಾದರೂ ಸಮಸ್ಯೆ ಆಗುತ್ತಿದ್ದರೆ ಸಿಗ್ನಲ್ ಲೈಟ್ ಪುನರ್ ಪರಿಶೀಲನೆ ನಡೆಸಿ ಎಂದು ಹೇಳುತ್ತೇನೆ ಎಂದರು.

ನಗರದಲ್ಲಿ ವೈಟ್ ಟ್ಯಾಪಿಂಗ್ ಮಾಡಬೇಕಿದೆ. 12 ಕಿಲೋ ಮೀಟರ್ ವೈಟ್ ಟ್ಯಾಪಿಂಗ್ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು.

Key words: unscientific, traffic signals, Mysore, Minister, H.C. Mahadevappa