ಬಿಹಾರ ಚುನಾವಣಾ ಫಲಿತಾಂಶ ಎಲ್ಲರಿಗೂ ಎಚ್ಚರಿಕೆ ಘಂಟೆ- ಸಚಿವ ಹೆಚ್.ಸಿ ಮಹದೇವಪ್ಪ

ಬೆಂಗಳೂರು,ನವೆಂಬರ್, 17,2025 (www.justkannada.in): ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಎಲ್ಲರಿಗೂ ಎಚ್ಚರಿಕೆಯ ಘಂಟೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ,  ಬಿಹಾರದಲ್ಲಿ ಯಾರೂ ನಿರೀಕ್ಷೆ  ಮಾಡದ ಫಲಿತಾಂಶ ಬಂದಿದೆ.  243 ಕ್ಷೇತ್ರಗಳಲ್ಲಿ 202 ಸ್ಥಾನ ಗೆದ್ದಿದ್ದಾರೆಂದರೆ ಅಚ್ಚರಿ. ವೋಟ್ ಎಲ್ಲಾ ಒಂದೇ ಕಡೆಗೆ ಬಿದ್ದಿದೆ. ಮತ ಪರಿಷ್ಕರಣೆ ಮಾಡುವ ವೇಳೇ 65 ಲಕ್ಷ ಹೆಸರು ಡಿಲೀಟ್ ಮಾಡಲಾಗಿದೆ.  18 ಲಕ್ಷ ಮತದಾರರನ್ನ ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮಹಿಳೆ ಮತದಾರರ ಖಾತೆಗೆ ನೇರವಾಗಿ 10 ಸಾವಿರ ರೂ. ಹಾಕಿದ್ದಾರೆ. ಹಣ ಕೊಟ್ಟಿರುವುದು ಲಂಚದ ರೀತಿ ಆಗಿದೆ. ಚುನಾವಣಾ ಹೇಗೆ ಅನುಮತಿ ನೀಡಿತು. ಇದೇ ರೀತಿ ಆದ್ರೆ ಮುಂದಿನ ಚುನಾವಣೆ ನಡೆಸೋದು ಹೇಗೆ? ಪ್ರಣಾಳಿಕೆ ಪ್ರಕಾರವಾಗಿ ನಾವು ಗೃಹಲಕ್ಷ್ಮಿ ಕೊಟ್ಟಿದ್ದೇವೆ ನಾವೇನು ಹೊಸದಾಗಿ ಹಣ ಕೊಟ್ಟಿಲ್ಲ ಎಂದು ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

Key words: Bihar election, results , warning, Minister, H.C. Mahadevappa