Thursday, August 13, 2026

BDA Apartments

Home Front Page ಮೈಸೂರಿನಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ ಸಚಿವ ಜಿಟಿ ದೇವೇಗೌಡ ಚಾಲನೆ: ಕಾಂಗ್ರೆಸ್ ನಾಯಕರೇ ಗೈರು…

ಮೈಸೂರಿನಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ ಸಚಿವ ಜಿಟಿ ದೇವೇಗೌಡ ಚಾಲನೆ: ಕಾಂಗ್ರೆಸ್ ನಾಯಕರೇ ಗೈರು…

ಮೈಸೂರು,ಜು,4,2019(www.justkannada.in): ಮೈಸೂರಿನ ಜೆ.ಕೆ ಮೈದಾನದಲ್ಲಿ ನಡೆಯುತ್ತಿರುವ ಜನಸ್ಪಂದನಾ ಕಾರ್ಯಕ್ರಮವನ್ನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಉದ್ಘಾಟಿಸಿದರು.

ಸಚಿವರಾದ ಬಳಿಕ  ಮೊದಲ ಬಾರಿಗೆ ಜಿಟಿ ದೇವೇಗೌಡರಿಂದ  ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಶಾಸಕರಾದ ಎಲ್ ನಾಗೇಂದ್ರ, ರಾಮದಾಸ್ ಹಾಗೂ ಪಾಲಿಕೆ ಮತ್ತು ಮುಡಾ ಸದಸ್ಯರು ಭಾಗಿಯಾಗಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೈರಾಗಿದ್ದಾರೆ.

ಕೇವಲ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನೇತೃತ್ವದಲ್ಲಿ ಜನ ಸ್ಪಂದನಾ ಕಾರ್ಯಕ್ರಮ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕರೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಇನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಂದು ಮೈಸೂರಿನಲ್ಲೇ ಇರಲಿದ್ದು,  ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ಕಚೇರಿಯ ಎದುರೇ ಜೆ.ಕೆ. ಮೈದಾನವಿದೆ. ಆದರೂ ಸಹ ಜನಸ್ಪಂದನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಗಮಿಸಿಲ್ಲ. ಕಾಂಗ್ರೆಸ್ ನ ಮೇಯರ್ ಹೊರತುಪಡಿಸಿದ್ರೆ ಕೆಲ ಮಂದಿ ಪಾಲಿಕೆ ಸದಸ್ಯರು ಕೂಡ ಗೈರಾಗಿದ್ದಾರೆ.

ಈ ನಡುವೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಾರ್ವಜನಿಕರು ಆಗಮಿಸಿದ್ದಾರೆ. ನಗರಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶದ ಜನರು  ಆಗಮಿಸಿದ್ದಾರೆ.

Key words: Minister -GT Deve Gowda –Janaspandana-program – Mysore