Saturday, October 17, 2026

Dasara Wishes

Happy Dasara
Home Front Page ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒಪ್ಪಿದ್ದಾರೆ ಎಂಬುದು ಅಪ್ರಸ್ತುತ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒಪ್ಪಿದ್ದಾರೆ ಎಂಬುದು ಅಪ್ರಸ್ತುತ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಮೇ,27,2026 (www.justkannada.in): ಸಿಎಂ ಸಿದ್ದರಾಮಯ್ಯ ರಾಜೀನಾಮಗೆ ಒಪ್ಪಿದ್ದಾರೆ ಎಂಬುದು ಅಪ್ರಸ್ತುತ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಪರಮೇಶ್ವರ್,  ಏನೇ ತೀರ್ಮಾನ ಇದ್ದರೂ ಹೈಕಮಾಂಡ್ ನಿರ್ಣಯ ಮಾಡುತ್ತೆ . ಹೈಕಮಾಂಡ್  ನಾಯಕರ ಜೊತೆ ಏನು ಚರ್ಚೆ ಆಗಿದೆ ಗೊತ್ತಿಲ್ಲ. ಒಳಗಡೆ ನಡೆದ ಚರ್ಚೆಯ ಬಗ್ಗೆ ಮಾಹಿತಿ ಇಲ್ಲ.  ಪರಿಷತ್ ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿರಬಹುದು ಎಂದರು.

ಇಂದು ರಣದೀಪ ಸುರ್ಜೇವಾಲ ವೇಣುಗೋಪಾಲ್ ಬರುತ್ತಾರೆ. ಅವರಿಬ್ಬರೂ ಏನು ಘೋಷಣೆ ಮಾಡುತ್ತಾರೋ ಗೊತ್ತಿಲ್ಲ ನಿನ್ನೆ ಜಾರ್ಜ್ ಮನೆಯಲ್ಲಿ ಚರ್ಚೆ ಆಗಲಿಲ್ಲ. ಸಿಎಂ ನಮ್ಮ ಗಮನಕ್ಕೆ ಏನೂ ತರಲಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾವು ಬದ್ಧ ಎಂದರು.

Key words: CM Siddaramaiah, resign, Home Minister, Dr. G. Parameshwar