ಸಿಎಂ ಡಿಸಿಎಂ ಹೇಳಿದ ಮೇಲೆ ಇನ್ನೊಬ್ಬರ ಹೇಳಿಕೆಗೆ ಮಹತ್ವ ಬೇಡ-ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ,ಫೆಬ್ರವರಿ,16,2026 (www.justkannada.in):  ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಸಿಎಂ ಮತ್ತು ಡಿಸಿಎಂ ಹೇಳಿದ ಮೇಲೆ ಇನ್ನೊಬ್ಬರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್  ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆಂದು  ಹೇಳಿದ್ದಾರೆ. ಅವರು ಹೇಳಿದ ಮೇಲೆ ಎಲ್ಲವೂ ಮುಗಿಯಿತು. ಸಿಎಂ ಡಿಸಿಎಂ ಹೇಳಿದ ಮೇಲೆ ಇನ್ನೊಬ್ಬರ ಹೇಳಿಕೆ ಅಗತ್ಯವಿಲ್ಲ ಯಾವುದೇ ಗೊಂದಲವಿಲ್ಲ ಶಾಸಕರು ಸಚಿವರು ಒಂದಾಗಿದ್ದೇವೆ ಎಂದರು.

ನಮ್ಮಲ್ಲಿ ಯಾವ ಗೊಂದಲವು ಇಲ್ಲ ಒಟ್ಟಾಗಿ ಇದ್ದೇವೆ. ಹಾವೇರಿಯಲ್ಲಿ ಸಾವಿರ ದಿನದ ಕಾರ್ಯಕ್ರಮ ಒಟ್ಟಾಗಿ ಮಾಡಿದ್ದೇವೆ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಲ್ಲ. ಭಿನ್ನಮತವೂ ಇಲ್ಲ. ಈ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಅಗತ್ಯತೆ ಇಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Key words:  CM. DCM, statement, Minister, Dinesh Gundu Rao