ಬೆಂಗಳೂರು,ಆಗಸ್ಟ್,8,2025 (www.justkannada.in): ಕೃಷಿ ತೋಟಗಾರಿಕೆಯ 18 ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಸಂಪುಟ ಉಪ ಸಮಿತಿ ತೀರ್ಮಾನ ಮಾಡಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು ಕಳೆದ ವರ್ಷ 6.11 ಲಕ್ಷ ರೈತರಿಗೆ 135 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಈ ಬಾರಿ 7 ಲಕ್ಷ ರೈತರಿಂದ ಖರೀದಿ ಮಾಡಲಿದ್ದೇವೆ. ಸೆಪ್ಟೆಂಬರ್ ನಿಂದ ನೊಂದಣಿ ಕಾರ್ಯ ಪ್ರಾರಂಭ ಮಾಡಲಿದ್ದೇವೆ. ಮುಂದಿನ ಮಾರ್ಚ್ ವರೆಗೂ ಉತ್ಪನ್ನಗಳ ಖರೀದಿ ಮಾಡಲಿದ್ದೇವೆ ಎಂದರು.
ಕ್ವಿಂಟಾಲ ರಾಗಿಯನ್ನು 4846 ರೂಪಾಯಿಗೆ ಖರೀದಿ ಮಾಡಲಿದ್ದೇವೆ. ಈ ಬಾರಿ 596 ರೂಪಾಯಿ ಹೆಚ್ಚಳ ಮಾಡಿದ್ದೇವೆ ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
Key words: support price, 18 agricultural, horticultural, products, Minister, Chaluvarayaswamy