ರಾಜ್ಯದಲ್ಲಿ ಮಂತ್ರಿಗಳ ಗೂಂಡಾಗಿರಿ ಹೆಚ್ಚಳ ಎಂದ ಬಿವೈ ವಿಜಯೇಂದ್ರಗೆ ಸಚಿವ ಚಲುರಾಯಸ್ವಾಮಿ ತಿರುಗೇಟು.

ಮಂಡ್ಯ,ನವೆಂಬರ್,21,2023(www.justkannada.in):  ರಾಜ್ಯದಲ್ಲಿ ಸಚಿವರ ಗೂಂಡಾಗಿರಿ ಹೆಚ್ಚಳವಾಗಿದೆ  ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರಗೆ ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ,  ಹೆಚ್.ಡಿ ಕುಮಾರಸ್ವಾಮಿ ಸೌಂಡ್ ಜಾಸ್ತಿಯಾಗಿದೆ ಅದಕ್ಕೆ ಬಿವೈ ವಿಜಯೇಂದ್ರ ಸೌಂಡ್ ಜಾಸ್ತಿ ಮಾಡುತ್ತಿದ್ದಾರೆ. ಹೆಚ್ ಡಿಕೆ ಪ್ರಭಾವದಿಂದ ಸೌಂಡ್ ಮಾಡುತ್ತಿದ್ದಾರೆ. ಪಾಪ ವಿಜಯೇಂದ್ರಗೆ ಏನು ಗೊತ್ತು ಪಾಪ ಅವರು ಇನ್ನು ಮಗು ಅಂತಾ. ಬಿವೈ ವೈ ವಿಜಯೇಂದ್ರ ಅಧ್ಯಕ್ಷರೆಂದು ಒಬ್ಬಲು ಯಾರು ತಯಾರಿಲ್ಲ. ಉತ್ತರ ಕೊಡಲು ನಮಗೆ ಗೊತ್ತಿಲ್ಲ ಅಂತಲ್ಲ.  ನಮ್ಮ ನಾಲಿಗೆ ಹಿಡಿತದಲ್ಲಿರಬೇಕು ಎಂದು ಸುಮ್ಮನಿದ್ದೇವೆ ಎಂದು ಟಾಂಗ್ ನೀಡಿದರು.

 ಮಾಜಿ ಮುಖ್ಯಮಂತ್ರಿ ಹೆಚ್​ ಡಿ​ ಕುಮಾರಸ್ವಾಮಿ ಅವರಿಗೆ ಈ ರಾಜ್ಯದ ಜವಾಬ್ದಾರಿ ಹಾಗೂ ಜನರ ಸಮಸ್ಯೆ ಮುಖ್ಯ ಅಲ್ಲ. ಕುಮಾರಸ್ವಾಮಿ ಯಾವತ್ತು ಜನರ ಸಮಸ್ಯೆ ಬಗ್ಗೆ ಮಾತಾಡಿಲ್ಲ. ಎರಡು ಮೂರು ತಿಂಗಳಿನಿಂದ ಹಿಡಿತ ಇಲ್ಲದೇ ಮಾತಾಡುತ್ತಿದ್ದಾರೆ.  ಅವರ ರೀತಿ ಮಾತನಾಡುವುದು ಸರಿ ಅಂದರೇ ನಾನು ಅವರಪ್ಪನ ರೀತಿ ಮಾತಾಡುತ್ತೇನೆ ಎಂದು ಹೆಚ್.ಡಿಕೆ ವಿರುದ್ದವೂ  ಚಲುವರಾಯಸ್ವಾಮಿ ಕಿಡಿಕಾರಿದರು.

Key words: Minister -Chalurayaswamy –bjp-state-president- BY Vijayendra