ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಕೋವಿಡ್ ಲಸಿಕೆ, ತಾಲೂಕು ಆರೋಗ್ಯಾಧಿಕಾರಿ ಅಮಾನತು 

ಬೆಂಗಳೂರು, ಏಪ್ರಿಲ್,02,2021(www.justkannada.in) : ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದ ಹಿನ್ನೆಲೆ ಆರೋಗ್ಯಾಧಿಕಾರಿಯನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ.Illegally,Sand,carrying,Truck,Seized,arrest,driverಮಾರ್ಚ್ 2 ರಂದು ರಂದು ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಡಾ. ಝಡ್. ಆರ್. ಮಕಾಂದಾರ ಅವರು ಸಚಿವ ಬಿ.ಸಿ.ಪಾಟೀಲ್ ಮನೆಗೆ ಹೋಗಿ ಲಸಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

 Minister-B.C.Patil's-home-Kovid vaccine-Taluk-Health-Officer-Suspension

ಸರ್ಕಾರದ ನಿಯಮಗಳ ಪ್ರಕಾರ ವಯಸ್ಕರೇ ಆಗಲಿ ವೃದ್ದರೇ ಆಗಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ನಿಯಮಾನುಸಾರ ನಿಗದಿತ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಸಚಿವರಿಗೆ ಲಸಿಕೆ ಹಾಕುವ ವಿಚಾರದಲ್ಲಿ ಹಿರೇಕೆರೂರು ಆರೋಗ್ಯ ಅಧಿಕಾರಿಗಳೇ ನಿಯಮಗಳನ್ನು ಮೀರಿ ಮನೆಗೆ ಹೋಗಿ ಲಸಿಕೆ ನೀಡಿರುದಕ್ಕೆ ಪರ ವಿರೋಧ ಚರ್ಚೆ ನಡೆದಿತ್ತು. ಇದೀಗ ಆರೋಗ್ಯಾಧಿಕಾರಿ ಝಡ್. ಆರ್. ಮಕಾಂದಾರರನ್ನು ಅಮಾನತು ಮಾಡಲಾಗಿದೆ.

key words : Minister-B.C.Patil’s-home-Kovid vaccine-Taluk-Health-Officer-Suspension