ನಿಲ್ಲದ ಮೈಕ್ರೋ ಫೈನಾನ್ಸ್ ಕಾಟ: ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗು ಕರೆದೊಯ್ದ ಸಿಬ್ಬಂದಿ

ಮೈಸೂರು,ಜೂನ್,20,2025 (www.justkannada.in) : ಮೈಸೂರು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಾಟ ಮುಂದುವರೆದಿದ್ದು ತಂದೆ ತಾಯಿ ಲೋನ್ ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣು ಮಗುವನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದ ಘಟನೆ  ನಡೆದಿದೆ.

ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗುವನ್ನು ಸಿಬ್ಬಂದಿಗಳು ಕರೆದೊಯ್ದು ನಿಮ್ಮ ತಾಯಿ ಎಲ್ಲಿ ತೋರಿಸಿ ಎಂದು ಮಗುವಿಗೆ ಹಿಂಸೆ  ನೀಡಿರುವ ಆರೋಪ ಕೇಳಿ ಬಂದಿದೆ.  ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ದಂಪತಿ ಜೀವನ ನಡೆಸಲು ಬಜಾಜ್ ಮೈಕ್ರೋ ಫೈನಾನ್ಸ್ ನಿಂದ 30 ಸಾವಿರ ಸಾಲ ಪಡೆದಿದ್ದರು.  ಈ ನಡುವೆ ದಂಪತಿ 13 ತಿಂಗಳು ಲೋನ್ ಕಟ್ಟಿದ್ದು  ಈ ತಿಂಗಳು 4 ದಿನ ತಡವಾಗಿದಕ್ಕೆ ಸಿಬ್ಬಂದಿಗಳು ಮನೆಗೆ ಬಂದು ನವೀನ್ ತಾಯಿಗೆ ಬೈದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ಬಳಿಕ ಪಕ್ಕದ ಊರಿನಲ್ಲಿದ್ದ ಮಗುವಿನ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸಿ ಬಾ ಎಂದು ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದರು ಎನ್ನಲಾಗಿದೆ.

ತಾಳಿ ಅಡವಿಟ್ಟು ದುಡ್ಡು ಕೊಡ್ತೀವಿ ಸಂಜೆ ಬನ್ನಿ ಎಂದರೂ ಕೂಡ ಅವರ ಮಾತನ್ನ ಕೇಳದೆ  ಈಗಲೇ ಹಣ ಬೇಕು ಎಂದು ಸಿಬ್ಬಂದಿಗಳು ಪೀಡಿಸಿದ್ದು, 4 ದಿನಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ  ವೇಳೆ ಬೆಳಕಿಗೆ ಬಂದಿದೆ.

ಹೀಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ನಾಗರೀಕ ಸಮಾಜ ತಲೆ ತಗ್ಗಿಸುವ ರೀತಿ ನಡೆದುಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಆದೇಶಕ್ಕೂ ಡೊಂಟ್ ಕೇರ್ ಎನ್ನುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿತ್ತು.vtu

Key words: microfinance, Harassment, old girl, loan, Mysore