Thursday, August 13, 2026

BDA Apartments

Home Front Page ಮೆಟ್ರೋ ಪ್ರಯಾಣ ದರ ಮತ್ತೆ ಪರಿಷ್ಕರಣೆ ಇಲ್ಲ: ಸ್ಟೇಜ್ ಬೈ ಸ್ಟೇಜ್ ರೇಟ್ ಮರ್ಜ್ ಮಾಡುತ್ತೇವೆ-...

ಮೆಟ್ರೋ ಪ್ರಯಾಣ ದರ ಮತ್ತೆ ಪರಿಷ್ಕರಣೆ ಇಲ್ಲ: ಸ್ಟೇಜ್ ಬೈ ಸ್ಟೇಜ್ ರೇಟ್ ಮರ್ಜ್ ಮಾಡುತ್ತೇವೆ- ಮಹೇಶ್ವರ್ ರಾವ್

ಬೆಂಗಳೂರು, ಫೆಬ್ರವರಿ 13,2025 (www.justkannada.in):  ಮೆಟ್ರೋ ಪ್ರಯಾಣ ದರವನ್ನ ದುಪ್ಪಟ್ಟು ಏರಿಕೆ ಮಾಡಿದ್ದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಈ ಬೆನ್ನಲ್ಲೆ ಇದೀಗ ಎಚ್ಚೆತ್ತುಕೊಂಡ ಬಿಎಂಆರ್ ಸಿಎಲ್  ಮೆಟ್ರೋ ಪ್ರಯಾಣದ ಕಡಿಮೆ ಮಾಡಲು ಮುಂದಾಗಿದೆ. ಆದರೆ ಮತ್ತೆ ಪ್ರಯಾಣ ದರ ಪರಿಷ್ಕರಣೆ  ಮಾಡಲ್ಲ. ಸ್ಟೇಜ್ ಬೈ ಸ್ಟೇಜ್ ರೇಟ್ ಮರ್ಜ್ ಮಾಡಿ ದರ ಕಡಿಮೆ ಮಾಡಲು ಯತ್ನಿಸುತ್ತೇವೆ ಎಂದು ಬಿಎಂಆರ್​ಸಿಎಲ್ ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಂಆರ್​ಸಿಎಲ್ ಎಂಡಿ ಮಹೇಶ್ವರ್ ರಾವ್, ಮೆಟ್ರೋ ಪ್ರಯಾಣ ದರ ಮತ್ತೆ ಪರಿಷ್ಕರಣೆ ಮಾಡುವುದಿಲ್ಲ, ಆದರೆ ಸ್ಟೇಜ್ ಬೈ ಸ್ಟೇಜ್ ರೇಟ್ ಮರ್ಜ್ ಮಾಡುತ್ತೇವೆ. ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡುವುದಕ್ಕೆ ಒಂದು ವಿಧಾನ ಇದೆ. ಅದರಂತೆಯೇ ದರ ನಿಗದಿ ಸಮಿತಿ ಅಧ್ಯಯನ ನಡೆಸಿ ಮಾಡಿದ ಶಿಫಾರಸಿನ ಮೇರೆಗೆ ದರ ಹೆಚ್ಚಳ ಮಾಡಲಾಗಿದೆ. ದರ ಏರಿಕೆಗೆ ಪ್ರಯಾಣಿಕರ ವಿರೋಧ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಬೋರ್ಡ್ ಜೊತೆ ಸಭೆ ನಡೆಸಿದ್ದೇವೆ.  ಎಲ್ಲಿ ಅನಿವಾರ್ಯವೋ ಅಲ್ಲಿ ದರ ಮರ್ಜ್ ಮಾಡಬೇಕಾಗುತ್ತದೆ. ಎಲ್ಲೆಲ್ಲಿ ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ಮೂಲಕ ದರ ಕಡಿಮೆಯಾಗುವಂತೆ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಮೆಟ್ರೋಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ. ಮೆಟ್ರೋ ಸಿಬ್ಬಂದಿ ವೇತನ, ಇತ್ಯಾದಿ ವಿಚಾರಗಳನ್ನೂ ದರ ಏರಿಕೆ ವೇಳೆ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸ್ಟೇಜ್​ನಲ್ಲಿ ರೇಟ್ ಜಂಪ್ ಆಗಿದ್ದರೆ ಮರ್ಜ್ ಮಾಡುತ್ತೇವೆ. ನಮ್ಮ ಮೆಟ್ರೋ ಪ್ರಯಾಣ ದರ ಕನಿಷ್ಠ 10 ರೂ. ಇರುತ್ತದೆ. ಗರಿಷ್ಠ 90 ರೂ. ಇರುತ್ತದೆ. ನಮ್ಮ ಮೆಟ್ರೋ ಕನಿಷ್ಠ, ಗರಿಷ್ಠ ದರದಲ್ಲಿ ಬದಲಾವಣೆ ಇರಲ್ಲ. ಶೇ 90-100ರಷ್ಟು ಜಂಪ್ ಆಗಿರುವುದನ್ನು ಕಡಿಮೆ ಮಾಡ್ತೇವೆ. 30 ರೂ. ಇದ್ದದ್ದು 60 ರೂಪಾಯಿ ಆಗಿದ್ದರೆ ಕಡಿಮೆ ಮಾಡ್ತೇವೆ ನಮ್ಮ ಮೆಟ್ರೋ ಸ್ಟೇಜ್ ​ಗಳ ನಡುವೆ ರೇಟ್ ಮರ್ಜ್ ಮಾಡ್ತೇವೆ. ನಮ್ಮ ಮೆಟ್ರೋ ಪ್ರಯಾಣ ದರವನ್ನು ಸ್ಟೇಜ್ ಆಧಾರದಲ್ಲಿ ಮರ್ಜ್ ಮಾಡುವ ಮೂಲಕ ಇಳಿಕೆ ಮಾಡಿ ಶೀಘ್ರದಲ್ಲೇ ವಿವರಗಳನ್ನು ಒದಗಿಸುತ್ತೇವೆ ಎಂದು ಅವರು ತಿಳಿಸಿದರು.

Key words: metro fares. Stage by stage. Rates, merged – Maheshwar Rao