ಬಾರ್ಸಿಲೋನ ತೊರೆಯುವ ನಿರ್ಧಾರ ಬದಲಿಸಿದ ಮೆಸ್ಸಿ

ಮ್ಯಾಡ್ರಿಡ್, ಸೆಪ್ಟೆಂಬರ್ 05, 2020 (www.justkannada.in): ಲಿಯೊನೆಲ್ ಮೆಸ್ಸಿ ಬಾರ್ಸಿಲೋನ ತೊರೆಯುವ ತನ್ನ ನಿರ್ಧಾರದಿಂದ ಯೂ-ಟರ್ನ್ ಪಡೆದಿದ್ದಾರೆ.

ನಾನು ಮುಂದಿನ ಋತುವಿನಲ್ಲೂ ಬಾರ್ಸಿಲೋನ ಫುಟ್ಬಾಲ್ ಕ್ಲಬ್‌ನಲ್ಲಿ ಉಳಿದುಕೊಳ್ಳುವೆ ಎಂದು ಹೇಳಿದ್ದಾರೆ.
ಬಾರ್ಸಿಲೋನದಿಂದ ಬಲವಂತವಾಗಿ ನಿರ್ಗಮಿಸಲು ನಾನು ಇಂತಹ ವಿಚಾರವನ್ನು ಪರಿಗಣಿಸಿರಲಿಲ್ಲ. ನಾನು ಈ ಕ್ಲಬ್‌ನಲ್ಲಿ ವೃತ್ತಿಜೀವನದ ಸಂಪೂರ್ಣ ಸಮಯ ಕಳೆದಿದ್ದೇನೆ ಎಂದಿದ್ದಾರೆ.

ನಾನು ಕ್ಲಬ್‌ನ್ನು ತ್ಯಜಿಸಲು ಸ್ವತಂತ್ರನಿದ್ದೇನೆ ಎಂದು ನಾನು ಯೋಚಿಸಿದ್ದೆ. ಈ ಋತುವಿನ ಅಂತ್ಯಕ್ಕೆ ಬಾರ್ಸಿಲೋನವನ್ನು ಬಿಡಬೇಕೇ, ಬೇಡವೇ ಎಂಬ ಕುರಿತು ಯೋಚಿಸುವೆ” ಎಂದು ಮೆಸ್ಸಿ ಹೇಳಿದ್ದಾರೆ.