ಭಿನ್ನಮತೀಯ ಸದಸ್ಯರು ನಾಯಕತ್ವ ಪ್ರಶ್ನಿಸಿ ಪತ್ರ ಬರೆದಿದ್ದಾರೆ – ರಾಹುಲ್ ಗಾಂಧಿ ಆರೋಪ

ಬೆಂಗಳೂರು, ಆಗಸ್ಟ್, 24, 2020(www.justkannada.in) : ಭಿನ್ನಮತೀಯ ಸದಸ್ಯರು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ನಾಯಕತ್ವ ಪ್ರಶ್ನಿಸಿ 23 ಮಂದಿ ನಾಯಕರು ಪತ್ರ ಬರೆದಿದ್ದಾರೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

jk-logo-justkannada-logo

ಕಾಂಗ್ರಸ್ ಪಕ್ಷದ ರಾಷ್ಟ್ರಿಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿ, ಭಿನ್ನಮತೀಯ ಸದಸ್ಯರು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಪತ್ರಗಳ ಹಿಂದೆ ಬಿಜೆಪಿ ರಹಸ್ಯ ಕಾರ್ಯಾಚರಣೆ ನಡೆಸಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ರಾಹುಲ್ ಗಾಂಧಿ ಹೇಳಿಕೆಗೆ ಹಿರಿಯ ನಾಯಕರಿಂದ ಆಕ್ರೋಶ : ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಪ್ರತಿಕ್ರಿಯಿಸಿ, ಪತ್ರದ ಬಗ್ಗೆ ತಪ್ಪು ಗ್ರಹಿಕೆ ಬೇಡ. ಪೂರ್ಣ ಪ್ರಮಾಣದ ನಾಯಕರು ಬೇಕು ಎಂದಷ್ಟೇ ಹೇಳಿದ್ದೇವೆ. ರಾಹುಲ್ ಹೇಳಿಕೆ ಸತ್ಯವಾದರೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಮತ್ತೋರ್ವ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಪ್ರತಿಕ್ರಿಯಿಸಿ,  ಕಳೆದ 30 ವರ್ಷಗಳಿಂದ ಬಿಜೆಪಿ ಪರವಾಗಿ ಒಂದು ಹೇಳಿಕೆ ನೀಡಿಲ್ಲ. ಪಕ್ಷದ ಬದಲಾವಣೆಗಾಗಿ ಪತ್ರ ಬರೆದಿದ್ದೇವೆ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

Key words : Dissident-members-wrote-letter-questioning-leadership-Rahul Gandhi-accuse