ಮೀಟೂ ಪ್ರಕರಣ: ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ಶೃತಿ ಹರಿಹರನ್‌ಗೆ ನೋಟಿಸ್

ಬೆಂಗಳೂರು, ನವೆಂಬರ್ 2021 (www.justkannada.in): ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನಟಿ ಶೃತಿ ಹರಿಹರನ್‌ಗೆ ಪೊಲೀಸರಿಂದ ನೋಟಿಸ್‌ ನೀಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

2018ರಲ್ಲಿ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲು ಮಾಡಿದ್ದ ಶ್ರುತಿ ಅವರ ದೂರಿನ್ವಯ ಅರ್ಜುನ್ ಸರ್ಜಾ ವಿರುದ್ಧ ಕೇಸ್ ದಾಖಲಾಗಿತ್ತು.

ಈಗ ಶೃತಿ ಅವರು ಸಲ್ಲಿಸಿದ್ದ ದೂರಿಗೆ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ‘ಬಿ’ರಿಪೋರ್ಟ್ ಸಲ್ಲಿಸಿಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ದೂರುದಾರರಿಗೆ ಮಾಹಿತಿ ನೀಡಬೇಕಾರಿರುವ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದೆ.

ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಸರ್ಜಾ ವಿರುದ್ಧ ಶ್ರುತಿ ಆರೋಪಿಸಿ ದೂರು ನೀಡಿದ್ದರು.