ಅಂಡಾಶಯ ಕ್ಯಾನ್ಸರ್ ಗೆ ಮೈಸೂರು ವಿವಿ ವಿಜ್ಞಾನಿಗಳಿಂದ ಔಷಧ ಸಂಶೋಧನೆ.

ಮೈಸೂರು,ಜೂನ್,18,2022(www.justkannada.in) ಅಂಡಾಶಯ ಕ್ಯಾನರ್‌ ಗೆ ಒಲಾಪರಿಬ್‌ ನೊಂದಿಗೆ ನೀಡುವಂಥ ಎನ್ ಪಿಬಿ  ಹೆಸರಿನ ಔಷಧ ಸಂಯುಕ್ತವನ್ನು ಮೈಸೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರ ವಿಭಾಗದ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ನಾಲ್ಕು ವರ್ಷದ ಸಂಶೋಧನೆ ಫಲವಾಗಿ ಎನ್‌ಪಿಬಿ ಔಷಧ ಸಂಯುಕ್ತವು ಮಾನವನ ಮೇಲೆ ಬಳಕೆ ಹಂತಕ್ಕೆ ಬಂದಿದ್ದು, ಡ್ರಗ್ ಕಂಟ್ರೋಲ್ ಜನರಲ್ ಆಫ್‌ ಇಂಡಿಯಾದಿಂದ ಒಪ್ಪಿಗೆ ಪಡೆಯುವ ಮಟ್ಟಕ್ಕೆ ಬಂದಿದೆ.mysore-university-chemistry-dr-basappa-discovers-drug-seed-for-brest-cancer

ಸಿಸ್ ಪ್ಲಾಟಿನ್ ಕಿಮೊಥೆರಪಿ ಒಳಗಾದ ಅಂಡಾಶಯ ಕ್ಯಾನ್ಸರ್‌ ರೋಗಿಗೆ ಮತ್ತೆ ಜೀವಕೋಶಗಳು ಹಾಗೇ ಉಳಿದು ಗುಣಮುಖ ಆಗದ ಉದಾಹರಣೆಗಳಿವೆ. ಗೆಡ್ಡೆ ತೆಗೆದ ಮೇಲೂ ಮತ್ತೆ ರೋಗ ಮರುಕಳಿಸುವ ಸಾಧ್ಯತೆಯಿರುತ್ತದೆ.

ಅಂಥ ಸಂದರ್ಭದಲ್ಲಿ ರೋಗಿಗೆ ‘ಒಲಾಪರಿಬ್ ನೊಂದಿಗೆ ಎನ್‌ಪಿಬಿ ಔಷಧ ಸಂಯುಕ್ತ ನೀಡಿದರೆ ಸಂಪೂರ್ಣ ಗುಣಮುಖ ಆಗುತ್ತಾರೆ. ನಮ್ಮ ಸಂಶೋಧನಾ ವರದಿಯು ನೇಚರ್ ನಿಯತಕಾಲಿಕೆಯಲ್ಲಿ ಸ್ವೀಕೃತಗೊಂಡಿದೆ. ಅಮೆರಿಕ, ಜಪಾನ್, ರಷ್ಯಾ ಸೇರಿದಂತೆ 14 ದೇಶಗಳಲ್ಲಿ ಪೇಟೆಂಟ್ ಸಹ ಪಡೆದಿದ್ದೇವೆ’ ಎಂದು ಮೈಸೂರು ವಿ.ವಿ. ರಾಯನಶಾಸ್ತ್ರ ವಿಭಾಗದ ನೋಡಲ್ ಅಧಿಕಾರಿ, ವಿಜ್ಞಾನಿ ಡಾ.ಬಸಪ್ಪ ತಿಳಿಸಿದ್ದಾರೆ.

“ರೋಗಿಯ ಕ್ಯಾನ್ಸರ್ ಗೆಡ್ಡೆಯ ಜೀವಕೋಶವನ್ನು ಇಲಿಗೆ ಪ್ರಯೋಗ ಮಾಡಿ ನಂತರ ಔಷಧ ನೀಡಿದ್ದೇವೆ. 17 ದಿನ ಇಲಿ ಬದುಕುಳಿದಿದೆ. ಅಂಡಾಶಯ ಕ್ಯಾನ್ಸ‌ರ್ ಗೆ ತನ್ನದೇ ಅದ ಔಷಧ ಸಂಯುಕ್ತ ಕಂಡುಹಿಡಿದ ಹೆಗ್ಗಳಿಕೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಪಡೆದಿದೆ ಎಂದು ಡಾ.ಬಸಪ್ಪ ಹೇಳಿದರು. ಡಾ. ಬಸಪ್ಪ ಅವರೊಂದಿಗೆ ಸಿಂಗುವಾ ವಿಶ್ವಾ ವಿದ್ಯಾನಿಲಯದ ಡಾ.ಪೀಟರ್ ಈ ಲಾಬಿ ಹಾಗೂ ಡಾ.ವಿಜಯ್ ಪಾಂಡೆ ಸಂಶೋಧನೆಗೆ ನೆರವಾಗಿದ್ದಾರೆ.

Key words: Medicine- research – Mysore university-scientists -ovarian cancer.

ENGLISH SUMMARY…

UoM scientists invents medicine for ovarian cancer
Mysuru, June 18, 2022 (www.justkannada.in): The scientists of the Organic Chemistry department of the University of Mysore have invented a medicine compound named NPB that is given with Olaparib for ovarian cancer.
The NBP compound has reached the phase of usage as the result of four years of rigorous research. Getting approval from the Drug Control General of India is pending.
“In cases of ovarian cancer, there are several instances where the cancer cells continue to remain in the person who has undergone Cisplatin Chemotherapy. There are possibilities that cancer may recur even after removal of the tumour. In this phase the patient is given the NPB compound along with ‘Olaparib,’ to cure. Our research report is received by the nature journal. We have already obtained patent in 14 countries including America, Japan and Russia,” explained Dr. Basappa, Scientist and Nodal Officer of the Department of Chemistry, University of Mysore.
“The medicine is experimented successfully on rat by injecting the living cells of the cancer tumour. The rat is surviving from 17 days. Thus, the University of Mysore has the pride of inventing indigenous medicine compound for ovarian cancer,” Dr. Basappa explained.
Dr. Peter of the Singuwa University and Dr. Vijay Pandey have helped in the invention.
Keywords: University of Mysore/ Ovarian Cancer/ Invention/ Medicine