ಮೈಸೂರು, ಡಿ.22: ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಹೊಸದಾಗಿ ಬಡಾವಣೆ ನಿರ್ಮಿಸಲು ತೀರ್ಮಾನಿಸಿದೆ. ಇಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಒಪ್ಪಿಗೆ ದೊರೆತಿದೆ.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.
ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಬಡಾವಣೆ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಇಲವಾಲ ಹೊಬಳಿಯ ಬೊಮ್ಮೇನಹಳ್ಳಿ, ನಾಗವಾಲ, ಕಮ್ಮರಹಳ್ಳಿ ಹಾಗೂ ದೊಡ್ಡಮಾರಗೌಡನ ಹಳ್ಳಿಯ ವಿವಿಧ ಸರ್ವೆ ನಂಬರ್ ಗಳ ಜಮೀನು ಸ್ವಾಧೀನಕ್ಕೆ ಎಂಡಿಎ ಮುಂದಾಗಿದೆ.

ಈ ಸಂಬಂದ ಈ ಪ್ರದೇಶದ ರೈತರು ಹಾಗೂ ಜಮೀನಿನ ಮಾಲೀಕರ ಮನವೊಲಿಸಿ ಭೂ ಸ್ವಾಧೀನ ಪಡಿಸಿಕೊಳ್ಳಲು ಎಂಡಿಎ ಉದ್ದೇಶಿಸಿದೆ. ಜತೆಗೆ ಶೇ. ೫೦ ; ೫೦ ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುವ ಯೋಜನಗೆ ಪ್ರಾಧಿಕಾರದ ಸಭೆ ಅಸ್ತು.
ಈ ಯೋಜನೆಯಡಿ ಅಂದಾಜು 20,000 ಕ್ಕೂ ಹೆಚ್ಚು ಜನರಿಗೆ ನಿವೇಶನ ಭಾಗ್ಯ ಲಭಿಸುವ ನಿರೀಕ್ಷೆಯಿದೆ. ಈಗಾಗಲೇ ನಿವೇಶನಗಳನ್ನು ಬಯಸಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿವೇಶಾನಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು. ಈ ಪೈಕಿ ೨೦,೦೦೦ ಮಂದಿಗೆ ನಿವೇಶನ ಲಭಿಸುವ ಅಂದಾಜಿದೆ.

ನಗರಾಭಿವೃದ್ಧಿ ಅಗತ್ಯತೆ, ಜನಸಂಖ್ಯೆಯ ವೃದ್ಧಿ ಹಾಗೂ ಮನೆರಹಿತರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ. ಬಡಾವಣೆ ನಿರ್ಮಾಣದ ಸ್ಥಳ ಆಯ್ಕೆ,ಯಾಗಿದ್ದು, ಮೂಲಸೌಕರ್ಯಗಳ ಒದಗಿಸುವಿಕೆ ಹಾಗೂ ನಿವೇಶನ ಹಂಚಿಕೆ ಕುರಿತು ಮುಂದಿನ ಹಂತದಲ್ಲಿ ವಿವರವಾದ ಯೋಜನೆ ರೂಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಲವಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಮುಡಾ, ಇದೀಗ MDA ಎಂದು ಮರುನಾಮಕರಣಗೊಂದ ಬಳಿಕ ಸ್ವಂತವಾಗಿ ಬಡಾವಣೆ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
key words: MDA, new layout, 20,000 sites, Mysore

SUMMARY:
MDA’s new layout: More than 20,000 people in Mysore will be lucky to have a home.
This is the first time since the formation of the Mysore Development Authority that a settlement has been constructed. In this context, the MDA has taken the initiative to acquire land with various survey numbers in Bommenahalli, Nagavala, Kammarahalli and Doddamaragowda village of the Ilawala hobli of the district.

In this regard, the MDA intends to acquire land by convincing the farmers and land owners of this area. In addition, the authority has held a meeting to discuss the scheme of allocating plots in the ratio of 50:50.
It is expected that more than 20,000 people will get plots under this scheme. More than one lakh people have already applied for plots. Out of these, it is estimated that 20,000 people will get plots.






