Sunday, September 20, 2026

BDA Apartments

ಮೇ 2ರಂದು ಮೆರವಣಿಗೆ ಮತ್ತು ವಿಜಯೋತ್ಸವ ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ… BDA J...
Home Front Page ಮೇ 2ರಂದು ಮೆರವಣಿಗೆ ಮತ್ತು ವಿಜಯೋತ್ಸವ ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ…

ಮೇ 2ರಂದು ಮೆರವಣಿಗೆ ಮತ್ತು ವಿಜಯೋತ್ಸವ ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ…

ನವದೆಹಲಿ,ಏಪ್ರಿಲ್,27,2021(www.justkannada.in):  ಮೇ 2 ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು ಈ ಹಿನ್ನೆಲೆಯಲ್ಲಿ  ಅಂದು ಮೆರವಣಿಗೆ ಮತ್ತು ವಿಜಯೋತ್ಸವವನ್ನು ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.jk

ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆಸಲಾಗಿದ್ದು ಮೇ 2ರಂದು ಫಲಿತಾಂಶ ಹೊರ ಬೀಳಲಿದೆ. ಹಾಗೆಯೇ ಕರ್ನಾಟಕದ  ಬೀದರ್ ನ ಬಸವಕಲ್ಯಾಣ, ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 17 ರಂದು ಮತದಾನ ನಡೆದಿದ್ದು ಮೇ 2ರಂದು ಫಲಿತಾಂಶ ಹೊರಬೀಳಲಿದೆ.may-2-election-commission-orders-restriction-celebration

ಈ ನಡುವೆ ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮೇ 2ರ ಚುನಾವಣಾ ಫಲಿತಾಂಶದಂದು ಮೆರವಣಿಗೆ ವಿಜಯೋತ್ಸವ ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

Key words: May 2- Election Commission -orders – Restriction- Celebration