ದೆಹಲಿಯಲ್ಲಿಂದು ಗರಿಷ್ಠ ಮಟ್ಟ ತಲುಪಿದ ವಾಯು ಮಾಲಿನ್ಯ ಪ್ರಮಾಣ

ಬೆಂಗಳೂರು, ಡಿಸೆಂಬರ್ 26, 2021 (www.justkannada.in):  ರಾಜ್ಯ ರಾಜಧಾನಿ ದೆಹಲಿಯಲ್ಲಿ ಇಂದು ಕೂಡ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿದೆ.

ಇಂದು ದೆಹಲಿಯಲ್ಲಿ ವಾಯು ಮಾಲಿನ್ಯ ಗರಿಷ್ಠ ಮಟ್ಟದಲ್ಲಿದೆ. ಇಂದಿನ ಮಟ್ಟ AQI 430 ಆಗಿದ್ದು ಇದು ಅತ್ಯಂತ ಕಳಪೆ ವಿಭಾಗದಲ್ಲಿ ಬರುತ್ತದೆ.

ದೀಪಾವಳಿಯ ನಂತರ ಹೆಚ್ಚುತ್ತಿರುವ ದೆಹಲಿ ವಾಯುಮಾಲಿನ್ಯ ಕಡಿಮೆಯಾಗುತ್ತಿಲ್ಲ. ಮೇಲಿಂದ ಮೇಲೆ ಹೆಚ್ಚುತ್ತಿರುವ ಚಳಿ ಮತ್ತು ಮಂಜು ದೆಹಲಿಯ ಜನರ ತೊಂದರೆಯನ್ನು ಹೆಚ್ಚಿಸಿದೆ.

ಯೆಲ್ಲೋ ಅಲರ್ಟ್: ದೆಹಲಿಯಲ್ಲಿ ಇಂದು ಲಘು ಮಳೆಯಾಗುವ ಸಾಧ್ಯತೆ ಇರುವುದರಿಂದ ಇಂದಿನಿಂದ ದೆಹಲಿಯ ಸ್ಥಿತಿ ಸುಧಾರಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬೆಳಗ್ಗೆಯಿಂದಲೇ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದೆ. ಹೀಗಾಗಿ IMD ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.