ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ..! ಕಾರಣವೇನು ಗೊತ್ತೆ..?

ಹಾಸನ ಮೇ,23,2025 (www.justkannada.in):   ಸಿನಿಮಾ ದೃಶ್ಯದಂತೆ ತಾಳಿ ಕಟ್ಟುವ ವೇಳೆಯೇ ಮದುವೆ ಮುರಿದು ಬಿದ್ದಿದ್ದು  ವಧು ಮದುವೆ ಬೇಡ ಎಂದು ಹಸಮಣೆಯಿಂದ ಎದ್ದು ಹೊರಟ ಘಟನೆ  ಹಾಸನ ನಗರದಲ್ಲಿ ನಡೆದಿದೆ.

ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ.  ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಮದುವೆ ನಿಶ್ಚಯವಾಗಿತ್ತು. ಈ ಮಧ್ಯೆ ಮುಹೂರ್ತದ ವೇಳೆ ವಧುವಿಗೆ ಕರೆ ಬಂದಿದ್ದು, ಹಸಮಣೆ ಹೇರಿ ವರ ತಾಳಿ ಕಟ್ಟು ವೇಳೆ ವಧು ಪಲ್ಲವಿ   ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದು ಹೇಳಿ ರೂಮ್ ಗೆ ತೆರಳಿದ್ದಾಳೆ.

ಪಲ್ಲವಿಯ ಮನವೊಲಿಸಲು ಪೋಷಕರು ಯತ್ನಿಸಿದ್ದು ಬಳಿಕ ವಿಚಾರ ತಿಳಿದು ಬಡಾವಣೆ ಹಾಗೂ ನಗರ ಠಾಣೆ ಪೊಲೀಸರು ಆಗಮಿಸಿದ್ದಾರೆ. ವಧುವನ್ನ ಬಡಾವಣೆ  ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರೂ  ಸಹ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ ವಧು ಪೊಲೀಸರು ಮತ್ತು ಪೋಷಕರ ಮನವೊಲಿಕೆಗೆ ಕ್ಯಾರೆ ಎನ್ನದೆ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ. ವರ ವೇಣುಗೋಪಾಲ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದು ವಧು  ಮದುವೆ ಬೇಡ ಎಂದ ಹಿನ್ನೆಲೆಯಲ್ಲಿ ವರ ವೇಣುಗೋಪಾಲ ಮದುವೆ ಕ್ಯಾನ್ಸಲ್ ಮಾಡಿದ್ದಾರೆ.

Key words:  marriage, broke up,  Hassan