ಶಾಸಕ ಶ್ರೀಮಂತಪಾಟೀಲ್ ಗೆ ಸಚಿವ ಸ್ಥಾನ ಸೇರಿ ವಿವಿಧ ಬೇಡಿಕೆಗಳನ್ನ ಸಿಎಂ ಬಿಎಸ್ ವೈ ಮುಂದಿಟ್ಟ ಮರಾಠ ನಿಯೋಗ….

ಬೆಂಗಳೂರು,ಡಿ,17,2019(www.justkannada.in):  ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನ ನೀಡುವಂತೆ ಮರಾಠ ನಿಯೋಗ ಇಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿತು.

 ಬೆಳಗಾವಿಯಿಂದ ಆಗಮಿಸಿದ್ದ ಮರಾಠ ನಿಯೋಗ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿತು.  ಮರಾಠ ಸಮುದಾಯದವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಮರಾಠ ಜನಾಂಗದವರನ್ನು 3 ಬಿಯಿಂದ 2ಎಗೆ ಸೇರಿಸಬೇಕು. ಕರ್ನಾಟಕ ಕ್ಷತ್ರಿಯ ಮರಾಠ ಸಮಾಜ ಅಭಿವೃದ್ಧಿ ಮಂಡಳಿ ರಚಿಸಬೇಕು ಎಂದು ಮನವಿ ಸಲ್ಲಿಸಿತು.

ಹಾಗೆಯೇ ನಮ್ಮ ಸಮುದಾಯಕ್ಕೆ ನಿಗಮ ಮಂಡಳಿಗಳಲ್ಲಿ ಕನಿಷ್ಠ 4 ಅಧ್ಯಕ್ಷ ಸ್ಥಾನವನ್ನಾದರು ನೀಡಬೇಕು. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನಮ್ಮ ಸಮಾಜಕ್ಕೆ ಯಾವುದೇ ಸ್ಥಾನಮಾನ ನೀಡಿಲ್ಲ. ಮರಾಠ ಜನಾಂಗದ ಪ್ರತಿನಿಧಿಯಾಗಿ ಶ್ರೀಮಂತ ಪಾಟೀಲ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ವಿವಿಧ ಬೇಡಿಕೆಯನ್ನ ಸಿಎಂ ಬಿಎಸ್ ವೈ ಮುಂದಿಟ್ಟಿತು.

Key words: Maratha delegation – appealed -Srimanthapatel – ministerial position