ತೆರಿಗೆ ಕಟ್ಟದವರನ್ನು ಮ್ಯಾಪಿಂಗ್ ಮಾಡಲು ಸೂಚನೆ – ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಜುಲೈ,15,2023(www.justkannada.in): ಯಾರು ತೆರಿಗೆ ಕಟ್ಟುತ್ತಿಲ್ಲವೋ ಅವರನ್ನು ಮ್ಯಾಪಿಂಗ್ ಮಾಡಲು ಸೂಚನೆ ನೀಡಲಾಗಿದೆ ಎಂದು ಡಿಸಿಎಂ  ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರು ನಿವಾಸಿಗಳ ಕ್ಷೇಮಾಭೀವೃದ್ದಿ ಮತ್ತು ನಾಗರೀಕ ಸಂಘದ ಜೊತೆ ಡಿಸಿಎಂ ಡಿ.ಕೆ ಶಿವಕುಮಾರ್ ಸಂವಾದ  ನಡೆಸಿ ಚರ್ಚಿಸಿದರು. ನಂತರ ಮಾತನಾಡಿದ ಅವರು,  ಟೆಕ್ನಾಲಜಿ ಉಪಯೋಗಿಸಿಕೊಂಡು ಹೊಸ ಕಾರ್ಯಕ್ರಮ ನೀಡಬೇಕಿದೆ. ಬೆಂಗಳೂರಲ್ಲಿ ತೆರಿಗೆ ಕಟ್ಟದೆ ಕಳ್ಳಾಟ ಆಡುವವರನ್ನು ಟ್ರೇಸ್ ಮಾಡಬೇಕು. ಪುಟ್ ಪಾತ್  ಕ್ಲಿಯರ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.  ಜಾಹೀರಾತಿಗೆ ಹೊಸ ಪಾಲಿಸಿ ಇದೆ. ಅದನ್ನ ನಾನು ಸ್ಟಡಿ ಮಾಡಿದ್ದೇನೆ ಎಂದರು.

ಆಸ್ತಿ ಪತ್ರಗಳನ್ನ ಮನೆಗ ತಲುಪಿಸುವ ಕೆಲಸ ಮಾಡಿ ಎಂದು  ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮೂರು ಮೇಜರ್ ನಿರ್ಧಾರಗಳನ್ನ ಈ ತಿಂಗಳ ಅಂತ್ಯದಲ್ಲಿ ಹೇಳುತ್ತೇನೆ . ಆದಷ್ಟು ಬೇಗ ಒಂದು ಹೊಸ ರೂಪ ಕೊಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Mapping – tax -defaulters – instructed-  DCM- DK Shivakumar.