777 ಚಾರ್ಲಿ ಚಿತ್ರ ತಂಡಕ್ಕೆ ಒಂದರ ಮೇಲೊಂದು ಗುಡ್ ನ್ಯೂಸ್

ಬೆಂಗಳೂರು, ಜೂನ್ 05, 2021 (www.justkannada.in): ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ  ಚಿತ್ರದ ವಿತರಣೆ ಹಕ್ಕುಗಳನ್ನು ಪರಷಭಾಷೆಯ ಖ್ಯಾತ ಸಂಸ್ಥೆಗಳು ಖರೀದಿಸಿವೆ.

ಮಲಯಾಳಂ ಭಾಷೆಯಲ್ಲಿ 777 ಚಾರ್ಲಿ ಚಿತ್ರವನ್ನು ಪೃಥ್ವಿರಾಜ್ ಸುಕುಮಾರನ್ ಪ್ರೊಡಕ್ಷನ್ ಬಿಡುಗಡೆ ಮಾಡಲು ಮುಂದಾಗಿದೆ.

ಇನ್ನು ತಮಿಳಿನಲ್ಲಿ ಸ್ಟಾರ್ ನಿರ್ದೇಶಕ ರಕ್ಷಿತ್ ಚಿತ್ರವನ್ನು ವಿತರಿಸಲು ಮುಂದಾಗಿದ್ದಾರೆ. ಕಾರ್ತಿಕ್ ಸುಬ್ಬರಾಜು ತಮಿಳಿನಲ್ಲಿ 777 ಚಾರ್ಲಿ ಸಿನಿಮಾ ರಿಲೀಸ್ ಮಾಡಲಿದ್ದಾರೆ.

ಕಿರಣ್ ರಾಜ್ ಈ ಚಿತ್ರ ನಿರ್ದೇಶಿಸಿದ್ದು, ಬಿಎಸ್ ಗುಪ್ತಾ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ನಾಳೆ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.