ಕಳ್ಳತನ ಮಾಡಲು ಹೋದವರು ಇದೀಗ ಪೊಲೀಸರ ಅತಿಥಿ….

ಚಾಮರಾಜನಗರ,ಅಕ್ಟೋಬರ್,30,2020(www.justkannada.in)  : ಜಿಲ್ಲೆಯ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ತೋಟದ ಮನೆಗೆ ಕಳ್ಳತನ ಮಾಡಲು ಬಂದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ.jk-logo-justkannada-logoಕೇರಳ ಮೂಲದ ಪ್ರದೀಪ್ ಎಂಬುವವರು ಹೊಂಗಹಳ್ಳಿ ಗ್ರಾಮದಲ್ಲಿ ಜಮೀನೊಂದನ್ನು ಗುತ್ತಿಗೆ ಪಡೆದು ಅಲ್ಲೇ ಮನೆ ಕಟ್ಟಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು‌.

ಪತಿ-ಪತ್ನಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತು ಪರಾರಿ

ಈ ವಿಷಯ ತಿಳಿದಿದ್ದ ಖದೀಮರು ನಿನ್ನೆ ತಡರಾತ್ರಿ ಕಬ್ಬಿಣದ ರಾಡ್, ಖಾರದಪುಡಿ ಹಿಡಿದು ಪ್ರದೀಪ್ ಮನೆ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆದ ಕೂಡಲೇ ಪತಿ-ಪತ್ನಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತು ಪರಾರಿಯಾಗುವಾಗ  ಸಿದ್ದು ಎಂಬಾತ ಮನೆ ಮಾಲೀಕ ಪ್ರದೀಪ್ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಕಳ್ಳನನ್ನ ಕುರ್ಚಿ, ಪಾತ್ರೆಯಲ್ಲಿ ಹೊಡೆದು ಹಿಡಿದಿದ್ದಾರೆ.

ಬಳಿಕ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಗುಂಡ್ಲುಪೇಟೆ ಪಿಎಸ್ಐ ರಾಜೇಂದ್ರ, ಹೆಡ್ ಕಾನ್ಸ್‌ಟೇಬಲ್ ಶಿವನಂಜಪ್ಪ ಮತ್ತಿತರೆ ಸಿಬ್ಬಂದಿ ಆರೋಪಿ ಸಿದ್ದುವನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪರಾರಿಯಾಗಿದ್ದ ಪ್ರದೀಪ್ ಮತ್ತು ಕುಮಾರ್​​ನನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.man,went,theft,Gundlupet,guest,police

ಸದ್ಯ, ಮನೆ ಮಾಲೀಕ ಪ್ರದೀಪ್ ಹಾಗೂ ಕಳ್ಳ ಸಿದ್ದು ಇಬ್ಬರೂ ಕೂಡ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : man-went-theft-Gundlupet-guest-police