ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್…

ಬೆಂಗಳೂರು,ಅಕ್ಟೋಬರ್,30,2020(www.justkannada.in): ವಿದೇಶದಿಂದ  ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಸಾರ್ಥಕ್ ಆರ್ಯ ಬಂಧಿತ ಆರೋಪಿ. ಈತ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ಸಾರ್ಥಕ್ ಆರ್ಯ ಫಾರಿನರ್ಸ್ ಪೋಸ್ಟ್ ಮೂಲಕ ಬೆಂಗಳೂರಿಗೆ  ಡ್ರಗ್ಸ್ ತರಿಸುತ್ತಿದ್ದ. ಬಳಿಕ ಅದನ್ನು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸುತ್ತಿದ್ದ. ಫಾರಿನರ್ಸ್ ಪೋಸ್ಟ್ ಕೊರಿಯರ್ ಮೇಲೆ ಸಿಸಿಬಿ ನಿಗಾ ಇಟ್ಟಿತ್ತು.

ಈ ಮಧ್ಯೆ ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್ ನಲ್ಲಿ ಸಿಸಿಬಿ ಪರಿಶೀಲನೆ ನಡೆಸಿದ ಬಳಿಕ ಟ್ರ್ಯಾಕ್ ರೆಕಾರ್ಡ್ ಮೂಲಕ ಹೆಚ್‍ಎಸ್‍ಆರ್ ಲೇಔಟ್‍ ನ ಟೆಕ್ಕಿ ಸಾರ್ಥಕ್ ಆರ್ಯ ಮನೆಯಲ್ಲಿ ಶೋಧ ನಡೆಸಿದ್ದರು. ಸಿಸಿಬಿ ವಿಶೇಷ ವಿಚಾರಣಾ ದಳದಿಂದ ಟೆಕ್ಕಿ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ಟೆಕ್ಕಿ ಮನೆಯಲ್ಲಿ ವಿದೇಶಿ ಮೂಲದ ಮಾದಕವಸ್ತು ಪತ್ತೆಯಾಗಿದೆ.bangalore-selling-drugs-abroad-arrest-man

ಬಂಧಿತನ ಮನೆಯಲ್ಲಿದ್ದ  4.99 ಗ್ರಾಂ ಎಲ್‍ಎಸ್‍ಡಿ, ಎಂಎಚ್ ಸೀರಿಸ್ ಪಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪಾಕೆಟ್, ಒಸಿಬಿ ಸ್ಲಿಮ್ ಸ್ಮೋಕ್ ಪೇಪರ್ ಪಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪಾಕೆಟ್, 100ಎಂಎಲ್ ಕೆಮಿಕಲ್ ಆಯಿಲ್ ಅನ್ನ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

Key words: Bangalore- selling -drugs – abroad- Arrest – man