Wednesday, August 5, 2026

BDA Apartments

Home Front Page 2014ರಲ್ಲಿ ಕೊಟ್ಟ ಭರವಸೆ ಈಡೇರಿಕೆ: ಧರ್ಮದ ಆಧಾರದಲ್ಲಿ ದೇಶ ಒಡೆದಿದ್ದೇ ಹಲವು ಸಮಸ್ಯೆಗಳಿಗೆ ಕಾರಣ.- ಕಾಂಗ್ರೆಸ್...

2014ರಲ್ಲಿ ಕೊಟ್ಟ ಭರವಸೆ ಈಡೇರಿಕೆ: ಧರ್ಮದ ಆಧಾರದಲ್ಲಿ ದೇಶ ಒಡೆದಿದ್ದೇ ಹಲವು ಸಮಸ್ಯೆಗಳಿಗೆ ಕಾರಣ.- ಕಾಂಗ್ರೆಸ್ ವಿರುದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಿಡಿ…

ಮಂಗಳೂರು,ಜ,27,2020(www.justkannada.in): ಧರ್ಮದ ಆಧಾರದಲ್ಲಿ ಕಾಂಗ್ರೆಸ್ ದೇಶವನ್ನ ಒಡೆದಿದ್ದೇ ಹಲವು ಸಮಸ್ಯೆಗಳಿಗೆ ಕಾರಣ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಿಡಿ ಕಾರಿದರು.

ಸಿಎಎ ಬೆಂಬಲಿಸಿ ಇಂದು ಮಂಗಳೂರಿನಲ್ಲಿ ಜನ ಜಾಗೃತಿ ಸಭೆ ಆಯೋಜಿಸಲಾಗಿದ್ದು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್,  ಮಂಗಳೂರಿಗೆ ಬಂದಿರುವುದು ನನ್ನ ಸೌಭಾಗ್ಯ. 2014 ಮತ್ತು 2019ರಲ್ಲಿ ನೀವು ಬಿಜೆಪಿ ಬೆಂಬಲಿಸಿದ್ದೀರಿ. ಮೋದಿ ಪ್ರಧಾನಿಯಾಗಲು ನೆರವಾಗಿದ್ದೀರಿ.  ಕರ್ನಾಟಕದಲ್ಲಿ ಬಿಜೆಪಿ ಬರಲು ಕಾರಣವಾಗಿದ್ದೀರಿ. ಹೀಗಾಗಿ ಧನ್ಯವಾದಗಳನ್ನ ಅರ್ಪಿಸುವುದಾಗಿ ತಿಳಿಸಿದರು.

2014ರಲ್ಲಿ ದೇಶದ ಜನರಿಗೆ ನಾವು ನೀಡಿದ್ದ ಭರವಸೆ ಈಡೇರಿಸಿದ್ದೇವೆ  ಪ್ರಣಾಳಿಕೆಯಲ್ಲಿ ನೀಡಿದ್ದ  ಭರವಸೆಯಂತೆ ತ್ರಿವಳಿ ತಲಾಖ್ ರದ್ದು ಮಾಡಿದ್ದೇವೆ. ರಾಮಮಂದಿರ ನಿರ್ಮಾಣ ಭರವಸೆ ನೀಡಿದ್ದವು. ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ರಾಮಮಂದಿರ ನಿರ್ಮಾಣ ಬಿಜೆಪಿಯ ಕನಸಾಗಿದೆ.  ರಾಮಮಂದಿರ ನಿರ್ಮಾಣಕ್ಕೆ ಸಂವಿಧಾನ ಬದ್ಧವಾಗಿ ಪ್ರಯತ್ನಿಸುತ್ತಿದ್ದೇವೆ ಎಂದರು.

ಪ ಬಂಗಾಳ ವಿಧಾನಸಭೆಯಲ್ಲಿ ಸಿಎಎ ವಿರುದ್ದ ನಿರ್ಣಯ ಅಂಗೀಕರಿಸಲಾಗಿದೆ.  ಸಿಎಎ ವಿರುದ್ದದ ನಿರ್ಣಯಕ್ಕೆ ಕಾಂಗ್ರೆಸ್ ಎಡಪಕ್ಷಗಳ ಬೆಂಬಲ ನೀಡಿವೆ. ಕಾಶ್ಮೀರಿ ಪಂಡಿತರು ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಅವರು ಏಕೆ ಹಾಗೆ ಬದುಕಬೇಕು. ಪ್ರಣಾಳಿಕೆಯಲ್ಲಿ ಮೂರು ದೇಶದ ಅಲ್ಪಸಂಖ್ಯಾತರಿಗೆ ನಾಗರೀಕತ್ವ ಕೊಡವ ಭರವಸೆ ನೀಡಿದ್ದವು. ಹೀಗಾಗಿ ಸಿಎಎ ಕಾಯ್ದೆ ಜಾರಿ ಮಾಡಲಾಗಿದೆ.  ಧರ್ಮದ ಆಧಾರದಲ್ಲಿ  ಧರ್ಮದ ಆಧಾರದಲ್ಲಿ ದೇಶ ಒಡೆದಿದ್ದೇ ಸಮಸ್ಯೆಗಳಿಗೆ ಕಾರಣ. ಭಾರತದಲ್ಲಿ ಒಂದು ಸಂವಿಧಾನ. ಒಬ್ಬರು ಪ್ರಧಾನಿ, ಒಂದು ಧ್ವಜಇದೆ. ಇದಕ್ಕೆ ಕಾಂಗ್ರೆಸ್ ಕಾರಣವಲ್ಲ. ಪ್ರಧಾನಿ ಮೋದಿ ಕಾರಣ ಎಂದು ತಿಳಿಸಿದರು. \

Key words: mangalore- Union Defense Minister -Rajnath Singh -against –Congress