ಕಾಂಗ್ರೆಸ್ಸಿಗರು ಉಗ್ರರ ಪರವೋ, ದೇಶದ ಪರವೋ ಸ್ಪಷ್ಟಪಡಿಸಲಿ- ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ಆಕ್ರೋಶ.

ಬೆಂಗಳೂರು,ಡಿಸೆಂಬರ್,16,2022(www.justkannada.in): ವೋಟರ್ ಐಡಿ ಹಗರಣ ಹೊರಬರುತ್ತಿದ್ದಂತೆ ಕುಕ್ಕರ್ ಸ್ಫೋಟ ಸಂಭವಿಸಿತು . ವೋಟರ್ ಐಡಿ ಹಗರಣ ಮುಚ್ಚಿ ಹಾಕಲು ಕುಕ್ಕರ್ ಬ್ಲಾಸ್ಟ್ ಒಂದು ಷಡ್ಯಂತ್ರ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿಎಂ ಬೊಮ್ಮಾಯಿ, ಸ್ಪೋಟ ಮಾಡಿಸುವ ಹುನ್ನಾರ ಬಯಲಾಗಿದೆ.  ಸ್ಪೋಟಿಸಿದ ವ್ಯಕ್ತಿ ಈ ಹಿಂದೆ ಎರಡು, ಮೂರು ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ದೇಶದ ಹೊರಗೆಯೂ ಶಂಕಿತ ಉಗ್ರನಿಗೆ ಸಂಪರ್ಕ ಇರುವ ಮಾಹಿತಿ ಇದೆ.  ಡಿಕೆ ಶಿವಕುಮಾರ್ ಹೇಳಿಕೆ ಶೋಭೆ ತರುವಂತಹದಲ್ಲ. ಇದು ಚುನಾವಣೆಯ ಓಲೈಕೆಯ ತಂತ್ರ. ಹೀಗೆ ಟೀಕೆ ಮಾಡಿದರೇ ಅಲ್ಪಸಂಖ್ಯಾತರ ಮತ ಬರುತ್ತೆ ಅಂತ ತಿಳಿದಿದ್ದಾರೆ. ಕಾಂಗ್ರೆಸ್ಸಿಗರು ಉಗ್ರರ ಪರವೋ ದೇಶದ ಪರವೋ ಈ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಲಿ ಎಂದು ಕಿಡಿಕಾರಿದರು.

ಒಂದು ಸಮುದಾಯದ  ಓಲೈಕೆಗಾಗಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹೀಗೆ ಮಾತನಾಡುವುದು ದೇಶಭಕ್ತನ ಕೆಲಸ ಅಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Key words: mangalore-blast-DK Shivakumar-statement- CM Bommai -outraged