ಸುಮಲತಾ ಪ್ರಭಾವ ಬಳಸಿಕೊಂಡು ಮಂಡ್ಯ, ಮೈಸೂರು ಗೆ‍ಲ್ಲುತ್ತೇವೆ- ಆರ್.ಅಶೋಕ್.

ಬೆಂಗಳೂರು,ಏಪ್ರಿಲ್,5,2024 (www.justkannada.in): ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು ಈ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸುಮಲತಾ ಪ್ರಭಾವ ಬಳಸಿಕೊಂಡು ಮಂಡ್ಯ, ಮೈಸೂರು ಕ್ಷೇತ್ರವನ್ನ ಗೆ‍ಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕಳೆದ ಚುನಾವಣೆಯಲ್ಲಿ ಸುಮಲತಾಗೆ ನಾವು ಬೆಂಬಲ ನೀಡಿದ್ದವು. ಸುಮಲತಾ ಅವರನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತೇವೆ. ಸುಮಲತಾ ಪ್ರಭಾವ ಬಳಸಿಕೊಂಡು ಮಂಡ್ಯ, ಮೈಸೂರು ಕ್ಷೇತ್ರವನ್ನ ಗೆ‍ಲ್ಲುತ್ತೇವೆ ಎಂದರು.

ಜೆಡಿಎಸ್ ಹಾಗೂ ಬಿಜೆಪಿ ತಳಮಟ್ಟದಿಂದಲೇ ಹೊಂದಾಣಿಕೆ ಆಗೇಕು. ರಾಜ್ಯದ ಎಲ್ಲಾ ಕಡೆ ಸಮನ್ವಯ ಸಮಿತಿ ಸಭೆ ಮಾಡಿದ್ದೇವೆ.  ಜೆಡಿಎಸ್ ಹಾಗೂ ಬಿಜೆಪಿ ಹಾಲು ಜೇನಿನಂತೆ  ಕೆಲಸ ಮಾಡಲಿದೆ ಎಂದು ಅಶೋಕ್ ತಿಳಿಸಿದರು.

Key words: Mandya, Mysore, Sumalatha, R.Ashok