ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆ.!

ಮಂಡ್ಯ,ಜನವರಿ,23,2024(www.justkannada.in):  ಶಾಲೆಗೆ ಹೋಗಿ ಆ ನಂತರ ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ  ಮೇಲುಕೋಟೆಯಲ್ಲಿ ನಡೆದಿದೆ.

ದೀಪಿಕಾ(28) ಕೊಲೆಯಾದ  ಶಿಕ್ಷಕಿ.  ದೀಪಿಕಾ ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಮೇಲುಕೋಟೆಯ ಎಸ್ ಇಟಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಜನವರಿ 20ರ ಮಧ್ಯಾಹ್ನದಿಂದ ಶಿಕ್ಷಕಿ ದೀಪಿಕಾ  ನಾಪತ್ತೆಯಾಗಿದ್ದು, ಇದೀಗ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಆಕೆಯನ್ನ ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿದ್ದಾರೆ.

ನಾಪತ್ತೆಯಾದ  ಬಗ್ಗೆ ಜನವರಿ 20 ರಂದು ಸಂಜೆ ಮೇಲುಕೋಟೆ ‌ಪೊಲೀಸ್ ಠಾಣೆಗೆ ಕುಟುಂಬಸ್ಥರು ‌ದೂರು ನೀಡಿದ್ದರು. ನಿನ್ನೆ ಸಂಜೆ ಮೇಲೆಕೋಟೆ ಬೆಟ್ಟದ ತಪ್ಪಲಿನಲ್ಲಿ ಶವ ಪತ್ತೆಯಾಗಿದೆ.

ಮಹಿಳೆ ನಾಪತ್ತೆ ಕೊಲೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಕ್ಷಕಿ ದೀಪಿಕಾ ಇನ್ಸ್ಟಾಗ್ರಾಂ ನಲ್ಲಿ ಸಾಕಷ್ಟು ಆಕ್ಟೀವ್ ಆಗಿದ್ದಳು.

Key words: mandya-melukote- Missing- teacher –found- dead body