ಮಂಡ್ಯದಲ್ಲಿ ‘ಕೈ’ ಅಭ್ಯರ್ಥಿ ಬೈಕ್ ರ್ಯಾಲಿ, ಅಬ್ಬರದ ಪ್ರಚಾರ: ಹಲವು ಮುಖಂಡರು ಸಾಥ್.

ಮಂಡ್ಯ, ಏಪ್ರಿಲ್, 6, 2024 (www.justkannada.in): ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಅಖಾಡ ರಂಗೇರಿದ್ದು ಪ್ರಚಾರದ ಭರಾಟೆ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ  ಸ್ಟಾರ್ ಚಂದ್ರು ಅವರು ಇಂದು  ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಮೂಲಕ ಅಬ್ಬರದ ಪ್ರಚಾರ ನಡೆಸಿದರು.

ಶ್ರೀರಂಗಪಟ್ಟಣ ತಾಲೂಕಿನ ಬಸ್ತಿಪುರ ಗ್ರಾಮದ ಬಸವೇಶ್ಚರ ದೇಗುಲದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ‌‌ ನೀಡಿದ ಸ್ಟಾರ್ ಚಂದ್ರು ಬೈಕ್ ರ್ಯಾಲಿ ಮೂಲಕ ಕಾರ್ಯಕರ್ತರ ಜೊತೆ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಿದರು.

ಬಸ್ತಿಪುರದಿಂದ ಆರಂಭವಾದ ಬೈಕ್ ರ್ಯಾಲಿ ಹುಲಿಕೆರೆ, ಹೂಂಡವಾಡಿ, ಕೆ.ಆರ್.ಎಸ್,  ಮಜ್ಜಿಗೆಪುರ, ಬೆಳಗೋಳ ಮಾರ್ಗವಾಗಿ ಹಲವು ಗ್ರಾಮಗಳ ಬೈಕ್ ರ್ಯಾಲಿ ಸಾಗಿತು.  ಕಾಂಗ್ರೆಸ್ ಕಾರ್ಯಕರ್ತರು ಹಳ್ಳಿಗಳಲ್ಲಿ ಹುರುಪುನಿಂದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಿದ್ದು, ಅಭ್ಯರ್ಥಿ ಸ್ಟಾರ್ ಚಂದ್ರುಗೆ ಕ್ಷೇತ್ರದ ಶಾಸಕ ರಮೇಶ್ ಬಾಬು ,ಕೈ ಮುಖಂಡ ಪುಟ್ಟೇಗೌಡ ತಾಲೂಕು ಅಧ್ಯಕ್ಷ ಪ್ರಕಾಶ್ ಸೇರಿ ಹಲವು ಮುಖಂಡರು ಸಾಥ್ ನೀಡಿದ್ದಾರೆ.

Key words: mandya, congress, candidate, StarChandru