ಮಂಡ್ಯದಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ.

ಮಂಡ್ಯ,ಜನವರಿ,6,2023(www.justkannada.in):  ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಚಿಕ್ಕಕೊಪ್ಪಲಿನ ಗ್ರಾಮದವರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಿವರಾಮ್ ಎಂಬುವವರ ಜಮೀನಿನಲ್ಲಿ ಬೋನ್ ಇರಿಸಿದ್ದರು. ಇದೀಗ ಬೋನಿಗೆ ಚಿರತೆ ಬಿದ್ದಿದೆ.

ಕಳೆದ 30 ದಿನಗಳಲ್ಲಿ ಮಂಡ್ಯದಲ್ಲಿ ಮೂರು ಚಿರತೆ ಸೆರೆಯಾಗಿವೆ. ಡಿಸೆಂಬರ್ 12 ರಂದು ಡಿಸೆಂಬರ್ 27 ರಂದು ಹಾಗೂ ಇಂದು ಚಿರತೆ ಸೆರೆಯಾಗಿವೆ.

Key words: Mandya-another- leopard- fell –bone