ಕನಕ ಗುರುಪೀಠಕ್ಕೆ ಭೇಟಿ ನೀಡಿ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದ ಪಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ.

ದಾವಣಗೆರೆ,ಜನವರಿ,6,2023(www.justkannada.in): ಬೆಳ್ಳೋಡಿಯ ಕನಕ ಗುರುಪೀಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಭೇಟಿ ನೀಡಿ ನಿರಂಜನಾನಂದಪುರಿಶ್ರೀಗಳ ಆಶೀರ್ವಾದ ಪಡೆದರು.

ಜೆಪಿ ನಡ್ಡಾ ಅವರು ನಿನ್ನೆಯಿಂದ ರಾಜ್ಯ ಪ್ರವಾಸದಲ್ಲಿದ್ದು ಇಂದು  ಕನಕ ಗುರುಪೀಠಕ್ಕೆ ಭೇಟಿ ನೀಡಿದ್ದಾರೆ. ಜೆಪಿ ನಡ್ಡಾ ಅವರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಾಥ್ ನೀಡಿದರು.

ಕನಕ ಗುರಪೀಠ ಬಳಿಕ ವಾಲ್ಮಿಕಿ ಪೀಠಕ್ಕೆ  ಭೇಟಿ ನೀಡಿ ಪ್ರಸನ್ನಾನಂದ  ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಹರಿಹರದ ಪಂಚಮಸಾಲಿ ಪೀಠಕ್ಕೂ ಜೆಪಿ ನಡ್ಡಾ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

Key words: BJP-National President -JP Nadda –visited- Kanaka Gurpeeta- Niranjananandpuri Shri.