ವಿಜಯನಗರ, ಮೇ, 20, 2025 (www.justkannada.in): ಪಹಲ್ಗಾಮ್ ನಲ್ಲಿ ಮೋದಿ ಸರ್ಕಾರ ಭದ್ರತೆ ಕೊಡಲಿಲ್ಲ. ಹೀಗಾಗಿ 26 ಅಮಾಯಕರ ಹತ್ಯೆಯಾಯಿತು. ಮೋದಿ ಸರ್ಕಾರದ ವೈಪಲ್ಯದಿಂದಲೇ ಹತ್ಯೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಇಂದು ವಿಜಯನಗರದ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸರ್ಕಾರವನ್ನ ಅಭಿನಂದಿಸುತ್ತೇನೆ. ನಮ್ಮ ವಾಗ್ದಾನಗಳನ್ನ ನಾವು ಈಡೇರಿಸಿದ್ದೇವೆ. ಇದು ನಮ್ಮ ಸರ್ಕಾರದ ದೊಡ್ಡ ಸಾಧನೆ. ಮೋದಿಯವರು ಅನೇಕ ಗ್ಯಾರಂಟಿಗಳನ್ನ ಕೊಟ್ಟರು ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆ ಎಂದರು, ತಂದ್ರಾ? ನೋಟ್ ಬ್ಯಾನ್ ಮಾಡಿ ಬಡವರ ಸಂಸಾರ ಹಾಳು ಮಾಡಿದರು ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷ ನಿಮಗೆ ಹೆದರುವ ಪ್ರಶ್ನೆಯೇ ಇಲ್ಲ ನಾವು ಪಕ್ಷ ಪಂಗಡ ಕ್ರೆಡಿಟ್ ನೋಡಲ್ಲ. ನಮಗೆ ದೇಶ ಮುಖ್ಯ. ಕೇಂದ್ರದ ಬಿಜೆಪಿ ಸರ್ಕಾರ ದುರಾಡಳಿತ ನಡೆಸುತ್ತಿದೆ. ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಬಿಜೆಪಿ ಸಚಿವ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೆ ಆ ಸಚಿವರ ವಿರುದ್ದ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಬರೀ ಸುಳ್ಳಿನ ರಾಜಕೀಯ ಮಾಡುತ್ತಾರೆ. ಅವರಿಗೆ ಚುನಾವಣೆ ಮೇಲೆ ಹೆಚ್ಚು ಪ್ರೀತಿ. ಬೊಗಳೆ ಭಾಷಣದಿಂದ ಎಂದೂ ದೇಶ ಉದ್ದಾರ ಆಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
Key words: Pahalgam Attack, failure, Modi government. Mallikarjuna kharge