Monday, October 12, 2026

Dasara Wishes

Mysore dasara DasraWishes_JK DasraWishes JK
Happy Dasara
Home Front Page ದೆಹಲಿಗೆ ಬರಲು ಸಿಎಂ, ಡಿಸಿಎಂಗೆ ಸೂಚನೆ ವಿಚಾರ: ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ಏನು?

ದೆಹಲಿಗೆ ಬರಲು ಸಿಎಂ, ಡಿಸಿಎಂಗೆ ಸೂಚನೆ ವಿಚಾರ: ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ಏನು?

ನವದೆಹಲಿ,ಮೇ,25,2026 (www.justkannada.in):  ದೆಹಲಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ನಾಳೆ ಸಭೆ ನಡೆಯಲಿದೆ. ನಾಯಕತ್ವ ಬದಲಾವಣೆ ,ಸಂಪುಟ ಪುನಾರಚನೆ ಇದ್ಯಾವುದರ ಬಗ್ಗೆ ನಾನು ಮಾತನಾಡಲ್ಲ. ಏನಿದ್ದರೂ  ರಾಹುಲ್ ಗಾಂಧಿ ಅವರು ಮಾತನಾಡುತ್ತಾರೆ ಎಂದಿದ್ದಾರೆ.

ನಾಳೆ  ದೆಹಲಿಯಲ್ಲಿ ಮಹತ್ವದ ಸಭೆಯಿದ್ದು ಪಾಲ್ಗೊಳ್ಳಲು ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: CM, DCM, instructed, Delhi,  Mallikarjun Kharge