ಧರಣಿ ಕೈಬಿಟ್ಟ ಮಹದಾಯಿ ಹೋರಾಟಗಾರರು…

ಬೆಂಗಳೂರು,ಅ,19,2019(www.justkannada.in):  ಮಹದಾಯಿ ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇಂದು ಧರಣಿ ಕೈ ಬಿಟ್ಟಿದ್ದಾರೆ.

ಯೋಜನೆ ಅನುಷ್ಟಾನಕ್ಕೆ ಅಧಿಸೂಚನೆ ಹೊರಡಿಸಬೇಕು. ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿ ಕಳೆದ ಮೂರು ದಿನಗಳಿಂದ  ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಮಹದಾಯಿ ಹೋರಾಟಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಹಾಗೆಯೇ ರಾಜ್ಯಪಾಲರ ಭೇಟಿಗೆ ಪಟ್ಟು ಹಿಡಿದಿದ್ದರು. ಈ ನಡುವೆ ಇಂದು ಬೆಳಿಗ್ಗೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಿ ಮನವೊಲಿಕೆಗೆ ಮುಂದಾಗಿದ್ದರು. ಅದರೆ ಇದಕ್ಕೆ ಪ್ರತಿಭಟನಾಕಾರರು ಬಗ್ಗಲಿಲ್ಲ.

ಈ ನಡುವೆ ರೈತ ಮಹಿಳೆಯರು ರಾಜಭವನಕ್ಕೆ ತೆರಳಿ ರಾಭವನದ ವಿಶೇಷ ಕರ್ತವ್ಯ ಅಧಿಕಾರಿಗೆ ಮನವಿಯನ್ನ ಸಲ್ಲಿಸಿ ಬಂದಿದ್ದಾರೆ. ಬಳಿಕ ಮಹದಾಯಿ ಹೋರಾಟಗಾರರು ಪ್ರತಿಭಟನೆ ಕೈ ಬಿಟ್ಟಿದ್ದು, ಆದರೆ ರಾಜ್ಯಪಾಲರು  ನೇರವಾಗಿ ಮನವಿ ಸ್ವೀಕರಿಸದಿದ್ದಕ್ಕೆ  ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words:  mahadayi –fighter-protest- withdrawn- bangalore