ಮಹಾಭಾರತ ಕನ್ನಡಕ್ಕೆ ಡಬ್: ಮೇ 11ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರ

ಬೆಂಗಳೂರು, ಮೇ 06, 2020 (www.justkannada.in): ಹಿಂದಿಯಲ್ಲಿದ್ದ ಮಹಾಭಾರತ ಧಾರಾವಾಹಿ ಇದೀಗ ಕನ್ನಡದಲ್ಲೂ ಪ್ರಸಾರವಾಗಲು ಪ್ರಾರಂಭವಾಗುತ್ತಿದೆ.

ಮೇ 11ರಿಂದ ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 8ಗಂಟೆಗೆ ಮಹಾಭಾರತ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಇದೀಗ ಮಹಾಭಾರತವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ.

ಈ ಧಾರಾವಾಹಿಯಲ್ಲಿ ಸೌರಭ್ ರಾಜ್ ಜೈನ್, ಶಾಹೀರ್ ಶೇಕ್, ಪೂಜಾ ಶರ್ಮಾ, ಆರವ್ ಚೌಧರಿ, ಪ್ರಣೀತ್ ಭಟ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.