ಯೂ ಟರ್ನ್ ‘ಪವನ್’ಗೆ ಇಂದು ಬರ್ತ್ ಡೇ ಸಂಭ್ರಮ…

ಬೆಂಗಳೂರು, ಅಕ್ಟೋಬರ್ 29, 2019 (www.justkannada.in): ಇಂದು ‘ಲೂಸಿಯಾ’ ಪವನ್ ಕುಮಾರ್ ಅವರಿಗೆ ಜನುಮ ದಿನದ ಸಂಭ್ರಮ…

ರಂಗಭೂಮಿಯಿಂದ ಪಯಣ ಆರಂಭಿಸಿದ ಇವರು ಹಲವು ಇಂಗ್ಲಿಷ್ ನಾಟಕಗಳನ್ನು ಬರೆದಿದ್ದಾರೆ. ನಂತರ ಯೋಗರಾಜ್ ಭಟ್ ರಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿದರು.

ಅಲ್ಲದೇ `ಮನಸಾರೆ’ ಮತ್ತು `ಪಂಚರಂಗಿ’ ಚಿತ್ರಗಳಿಗೆ ಸಂಭಾಷಣೆ ಬರೆದಿದರು. ‘ಲೈಫು ಇಷ್ಟೇನೆ’, ‘ಲೂಸಿಯಾ’, ‘ಯೂಟರ್ನ್’ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಕುಮಾರ್, ‘ಮಿ. ಗರಗಸ’, `ಇಂತಿ ನಿನ್ನ ಪ್ರೀತಿಯ’, ‘ಮನಸಾರೆ’,`ಸರ್ಕಸ್’,`ಪಂಚರಂಗಿ’, ‘ಗುಳ್ಟು’ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.