ನಾವು ಎಲ್ಲಿ ಇರುತ್ತೇವೋ ಅಲ್ಲಿಗೆ ನಿಷ್ಠೆ ತೋರಬೇಕು- ಶಾಸಕರಿಬ್ಬರಿಗೆ ಮುನಿರತ್ನ ಪರೋಕ್ಷ ಟಾಂಗ್.

ಬೆಂಗಳೂರು,ಫೆಬ್ರವರಿ,27,2024(www.justkannada.in): ರಾಜ್ಯಸಭೆ ಚುನಾವಣೆಯಲ್ಲಿ ಶಾಸಕ ಎಸ್.ಟಿ ಸೋಮಶೇಖರ್ ಅಡ್ಡ ಮತದಾನ  ಮಾಡಿದ್ದು, ಶಾಸಕ ಶಿವರಾಂ ಹೆಬ್ಬಾರ್ ಸಹ ಕಾಂಗ್ರೆಸ್ ಗೆ ಮತ ಚಲಾಯಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ಪರೋಕ್ಷ ಟಾಂಗ್ ನೀಡಿದ್ದಾರೆ.

ನಾವು ಎಲ್ಲಿಇರೋತ್ತೇವೋ ಅಲ್ಲಿಗೆ ನಿಷ್ಟೆ ತೋರಬೇಕು.  ನಾನು ಬಿಜೆಪಿ ನಾಯಕ,  ಬಿಜೆಪಿಗೆ ಮತ ಹಾಕುವೆ. ನಾವು ಎಲ್ಲಿ ಇರುತ್ತೇವೋ ಅಲ್ಲಿ ನಿಷ್ಠೆಯಿಂದ ಇರಬೇಕು ಎಂದು ಹೇಳುವ ಮೂಲಕ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಗೆ ಕುಟುಕಿದ್ದಾರೆ.

Key words: loyal –bjp- Muniratna – two- MLAs.